ನವದೆಹಲಿ: ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೈಯಲ್ (ವಿವಿಪಿಎಟಿ) ಅಳವಡಿಕೆ ಮಾಡದ ಮತಯಂತ್ರಗಳನ್ನು ಬಳಕೆ ಮಾಡುವುದನ್ನು ಪ್ರಶ್ನಿಸಿ ಸಮಾಜವಾದಿ ಪಕ್ಷದ ಶಾಸಕ ರೆಹೆಮಾನ್ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಿವಿಪಿಎಟಿ ಯನ್ನೊಳಗೊಂಡ ಮತಯಂತ್ರಗಳನ್ನು ಬಳಕೆ ಮಾಡುವಂತೆ ಮನವಿ ಮಾಡಿ ರೆಹಮಾನ್ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೈಯಲ್ (ವಿವಿಪಿಎಟಿ) ಅಳವಡಿಕೆ ಮಾಡದ ಮತಯಂತ್ರಗಳನ್ನು ಬಳಕೆ ಮಾಡದಂತೆ ನಿರ್ದೇಶನ ನೀಡಬೇಕೆಂದೂ, ವಿವಿಪಿಎಟಿ ಅಳವಡಿಕೆ ಮಾಡುವವರೆಗೆ ಮುಂದಿನ ಚುನಾವಣೆಗಳನ್ನು ಮತ ರೆಹಮಾನ್ ಕೋರ್ಟ್ ಗೆ ಮನವಿ ಮಾಡಿ ಬ್ಯಾಲೆಟ್ ಚೀಟಿಗಳನ್ನೇ ಬಳಕೆ ಮಾಡಿ ಮತದಾನ ಮಾಡಬೇಕೆಂದು ಮನವಿ ಮಾಡಿದ್ದರು.
ಇವಿಎಂ ಗಳ ದುರ್ಬಳಕೆ ಕುರಿತು ತನಿಖೆಗೆ ನಿರ್ದೇಶನ ನೀಡಬೇಕೆಂದು ಪ್ರತಿಪಕ್ಷಗಳು ಸಹ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಮೇ.8 ಕ್ಕೆ ಈ ಬಗ್ಗೆ ವಿಚಾರಣೆ ನಡೆಯಲಿದೆ.