ಬಯಾಂದೇರ್: ಕಳೆದ ಎಂಟು ತಿಂಗಳಿಂದ ಬಾಲಕಿ ಮೇಲೆ ಪ್ರಿಯಕರ ಸೇರಿ 8 ಮಂದಿ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಅತ್ಯಾಚಾರ ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿದ್ದಾಳೆ.
ಬಯಾಂದೇರ್ ನಿವಾಸಿಯಾಗಿದ್ದ ಸಂತ್ರಸ್ತ ಯುವತಿ ಮನೆಯ ಪಕ್ಕದಲ್ಲೇ 20 ವರ್ಷದ ಪ್ರಿಯಕರ ವಾಸವಾಗಿದ್ದ. ಕಳೆದ 8 ತಿಂಗಳ ಹಿಂದೆ ಯುವತಿಯನ್ನು ಕರೆದುಕೊಂಡ ಹೋದ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ನಂತರ ಪೋಷಕರಿಗೆ ವಿಷಯ ತಿಳಿಸದಂತೆ ಧಮ್ಕಿ ಹಾಕಿದ್ದ. ಇದಾದ ಮೂರು ದಿನಗಳ ನಂತರ ಮತ್ತೆ ಆಕೆಯನ್ನು ಅದೇ ಜಾಗಕ್ಕೆ ಕರೆಸಿಕೊಂಡ ಪ್ರಿಯಕರ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ತನ್ನ ಮೂವರು ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು.
ದಿನ ಕಳೆದಂತೆ ಬಾಲಕಿ ದೇಹದಲ್ಲಿ ಹಲವು ಬದಲಾವಣೆಗಳು ಆಗಿದ್ದು ಇದನ್ನು ಗುರುತಿಸಿದ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ 45 ದಿನಗಳ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದು ನಂತರ ಬಯಾಂದೇರ್ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics