ಸುಪ್ರೀಂ ಕೋರ್ಟ್ 
ದೇಶ

ವಿವಿಧ ಹೈಕೋರ್ಟ್ ಗಳಿಗೆ 48 ನ್ಯಾಯಾಧೀಶರ ಹೆಸರು ಶಿಫಾರಸು ಮಾಡಿದ ಮಂಡಳಿ

ನ್ಯಾಯಾಂಗದಲ್ಲಿ ಬಾಕಿ ಇರುವ ಕೇಸುಗಳನ್ನು ಶೀಘ್ರ ಬಗೆಹರಿಸಲು ಮುಖ್ಯ ನ್ಯಾಯಮೂರ್ತಿ...

ನವದೆಹಲಿ: ನ್ಯಾಯಾಂಗದಲ್ಲಿ ಬಾಕಿ ಇರುವ ಕೇಸುಗಳನ್ನು ಶೀಘ್ರ ಬಗೆಹರಿಸಲು ಮುಖ್ಯ ನ್ಯಾಯಮೂರ್ತಿ ಜೆ.ಎಸ್.  ಖೇಹರ್ ಅವರನ್ನೊಳಗೊಂಡ ಮಂಡಳಿ ಮುಂದಾಗಿದೆ. ಇದಕ್ಕಾಗಿ ದೇಶದ ವಿವಿಧ ಹೈಕೋರ್ಟ್ ಗಳಲ್ಲಿ 48 ಮಂದಿ ನ್ಯಾಯಾಧೀಶರ ಹೆಸರಿಗೆ ಅನುಮೋದನೆ ನೀಡಿದೆ.
ಈ ನ್ಯಾಯಾಧೀಶರ ಹೆಸರಿನ ಅನುಮೋದನೆಯಿಂದ 24 ಹೈಕೋರ್ಟ್ ಗಳಲ್ಲಿ ಖಾಲಿಯಿರುವ ಹುದ್ದೆಗಳು ಶೀಘ್ರವೇ ಭರ್ತಿಯಾಗಲಿವೆ.  ಪ್ರಸ್ತುತ ನ್ಯಾಯಾಧೀಶರ ಸಂಖ್ಯೆ 1,079 ಇದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಐವರು ಹಿರಿಯ ನ್ಯಾಯಾಧೀಶರು ಮಂಡಳಿಯಲ್ಲಿದ್ದಾರೆ.
ಮಂಡಳಿಯು, ಮುಂಬೈ ಹೈಕೋರ್ಟ್ ನಲ್ಲಿ 14 ನ್ಯಾಯಾಧೀಶರು, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗಳಲ್ಲಿ ತಲಾ 9 ನ್ಯಾಯಾಧೀಶರುಗಳ ನೇಮಕಕ್ಕೆ ಶಿಫಾರಸು ಮಾಡಿದೆ. ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಪಾಟ್ನಾ ಹೈಕೋರ್ಟ್ ಗಳಲ್ಲಿ ತಲಾ 6 ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿದೆ. ದೆಹಲಿ ಹೈಕೋರ್ಟ್ ಗೆ ನಾಲ್ವರು ಮತ್ತು ಜಮ್ಮು-ಕಾಶ್ಮೀರಕ್ಕೆ ಮೂವರು ನ್ಯಾಯಾಧೀಶರ ನೇಮಕಕ್ಕೆ ಮಂಡಳಿ ಶಿಫಾರಸು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ