ದೇಶ

ಪ್ರಧಾನಿ ಮೋದಿಯನ್ನು ಅಲೆಕ್ಸಾಂಡರ್, ನೆಪೋಲಿಯನ್ ಜೊತೆ ಹೋಲಿಕೆ ಮಾಡಿದ ಶಿವಸೇನೆ

Sumana Upadhyaya
ಮುಂಬೈ: ಶಿವಸೇನೆಯ ಮುಖವಾಣಿ ಸಾಮ್ನಾದ ಸೋಮವಾರದ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನ ಮಾಡಲಾಗಿದ್ದು, ಅವರ ಆಡಳಿತವನ್ನು ಅಲೆಕ್ಸಾಂಡರ್ ಮತ್ತು ನಪೊಲಿಯನ್ ಬೊನಪಾರ್ತೆ ಅವರ ಆಡಳಿಕ ಕಾಲಕ್ಕೆ ಹೋಲಿಸಲಾಗಿದೆ.
ಸುವರ್ಣಯುಗವೆಂಬುದು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿರಬಾರದು. ಅದು ಇಡೀ ರಾಜ್ಯ ಮತ್ತು ದೇಶಕ್ಕೆ ಸೇರಬೇಕು. ಅದರಲ್ಲಿ ನಮಗೆ ನಂಬಿಕೆ ಇದೆ. ಅಲೆಕ್ಸಾಂಡರ್ ಮತ್ತು ನಪೊಲಿಯನ್ ಅವರಿಗೆ ತಮ್ಮ ರಾಜಕೀಯ ಜೀವನದಲ್ಲಿ ಜಗತ್ತನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಅಲ್ಲದೆ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಸರ್ಕಾರ ಮೇಲೆ ಕೂಡ ಆರೋಪ ಮಾಡಲಾಗಿದ್ದು ಅಲ್ಲಿನ ಹಿಂಸಾಚಾರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಶ್ರೀನಗರ ಉಪ ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರ ಹದಗೆಟ್ಟಿತ್ತು. ಕಡಿಮೆ ಮತದಾನವಾಗಿದ್ದು ಭಾರತೀಯ ಸೇನೆಯನ್ನು ಕೂಡ ಗೌರವದಿಂದ ಅಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಲಾಗಿದೆ.
ನಾವು ಕೇವಲ ಬಿಜೆಪಿ ಬೆಳವಣಿಗೆಯನ್ನು ಮಾತ್ರ ಬಯಸುತ್ತಿಲ್ಲ. ಭಾರತ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸ್ಥಿರವಾಗಬೇಕೆಂಬುದು ನಮ್ಮ ಆಶಯ ಎಂದು ಪ್ರಧಾನಿ ಮೋದಿ ನಿನ್ನೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಾಮ್ನಾ ಸಂಪಾದಕೀಯದಲ್ಲಿ ಹೀಗೆ ಬರೆಯಲಾಗಿದೆ.
ಆದರೆ ಸಂಪಾದಕೀಯ ಬರಹದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಠಿಣ ಶ್ರಮ ಮತ್ತು ಸಮರ್ಪಣೆಯನ್ನು ಶ್ಲಾಘಿಸಲಾಗಿದ್ದು ಬಿಜೆಪಿ ಅನೇಕ ರಾಜ್ಯಗಳಲ್ಲಿ ಗೆಲುವು ಕಂಡಿದ್ದು ಉತ್ತಮ ಬೆಳವಣಿಗೆ ಮತ್ತು ಇತರ ಪಕ್ಷಗಳಿಗೆ ಸ್ಫೂರ್ತಿ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
SCROLL FOR NEXT