ಮಹಿಳೆಯರ ವಿರುದ್ಧ ಹೇಳಿಕೆ: ಯೋಗಿ ಆದಿತ್ಯನಾಥ್ ಕ್ಷಮೆ ಕೋರುವಂತೆ ಕಾಂಗ್ರೆಸ್ ಆಗ್ರಹ
ತಮ್ಮ ವೆಬ್ ಸೈಟ್ ನಲ್ಲಿ ದೇಶದ ಮಹಿಳೆಯರ ಬಗ್ಗೆ ತಿರಸ್ಕಾರ ಮತ್ತು ಅಗೌರವಯುತ ಅಭಿಪ್ರಾಯ ವ್ಯಕ್ತ ಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್...
ನವದೆಹಲಿ: ತಮ್ಮ ವೆಬ್ ಸೈಟ್ ನಲ್ಲಿ ದೇಶದ ಮಹಿಳೆಯರ ಬಗ್ಗೆ ತಿರಸ್ಕಾರ ಮತ್ತು ಅಗೌರವಯುತ ಅಭಿಪ್ರಾಯ ವ್ಯಕ್ತ ಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಮುಂದಿನ ದಿನಗಳಲ್ಲಿ ಇಂತಹ ಅಭಿಪ್ರಾಯ ವ್ಯಕ್ತಪಡಿಸದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯೋಗಿ ಆದಿತ್ಯನಾಥ್ ಗೆ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಬರಹ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಸಂವಹನಾ ಇಲಾಖೆ ಮುಖ್ಯಸ್ಥ ರಣ್ ದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಭಾರತದ ಮಹಿಳೆಯರಿಗೆ ಯಾವಾಗಲೂ ರಕ್ಷಣೆಯ ಅವಶ್ಯಕತೆಯಿರುತ್ತದೆ, ಮಹಿಳೆಯರಿಗೆ ಸ್ವತಂತ್ರ್ಯವಿರಬಾರದು ಎಂದು ವೆಬ್ ಸೈಟ್ ನಲ್ಲಿ ಬರೆದಿದ್ದಾರೆ. ಅಂದರೆ ಮಹಿಳೆಗೆ ಸ್ವಾತಂತ್ರ್ಯ ನೀಡಬಾರದು ಯಾವಾಗಲು, ಆಕೆಗೆ ಪತಿ, ತಂದೆ, ಇಲ್ಲವೇ ಮಗ ರಕ್ಷಣೆ ನೀಡಬೇಕು ಎಂದು ಬರೆದಿದ್ದಾರೆ, ಹೀಗಾಗಿ ಅವರು ಕ್ಷಮೆ ಕೇಳಬೇಕೆಂದು ಸುರ್ಜೆತ್ ವಾಲಾ ಆಗ್ರಹಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.