ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿ ವರ್ಷ ಮಾರ್ಚ್ 31ರೊಳಗೆ ನಿಮ್ಮ ಆಸ್ತಿ ಘೋಷಿಸುವಂತೆ ತಮ್ಮ ಸಂಪುಟದ ಸಚಿವರಿಗೆ ಸೂಚಿಸಿದ್ದಾರೆ.
ಆಸ್ತಿ ವಿವರ ಘೋಷಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ ತೊರಬೇಡಿ ಎಂದು ಸಿಎಂ ಯೋಗಿ ಸಚಿವರಿಗೆ ಎಚ್ಚರಿಸಿರುವುದಾಗಿ ಇಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಉದ್ಯಮಿಗಳು ಹಾಗೂ ಗುತ್ತಿಗೆದಾರರಿಂದ ದೂರವಿರುವಂತೆ ಸಚಿವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
5 ಸಾವಿರ ರುಪಾಯಿಗಿಂತ ಹೆಚ್ಚಿನ ಬೆಲೆಯ ಯಾವುದೇ ದುಬಾರಿ ಗಿಫ್ಟ್ ಗಳನ್ನು ಸ್ವೀಕರಿಸದಂತೆ, ಅದ್ಧೂರಿ ಪಾರ್ಟಿಗಳಲ್ಲಿ ಭಾಗವಹಿಸದಂತೆ ಹಾಗೂ ಐಷಾರಾಮಿ ಹೋಟೆಗಳಲ್ಲಿ ತಂಗದೆ, ವೈಯಕ್ತಿಕ ಮತ್ತು ಅಧಿಕೃತ ಪ್ರವಾಸದ ವೇಳೆ ಸಚಿವರು ಸರ್ಕಾರ ಅತಿಥಿ ಗೃಹಗಳಲ್ಲಿ ಉಳಿದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.