ಸಂಗ್ರಹ ಚಿತ್ರ 
ದೇಶ

ದಿನಕರನ್ ಪರಾರಿಯಾಗುವ ಶಂಕೆ, ಲುಕ್ ಔಟ್ ನೋಟಿಸ್ ನೀಡಿದ ಪೊಲೀಸರು!

ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿನ್ಹೆಗಾಗಿ ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಕ್ರೈ ಬ್ರ್ಯಾಂಚ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಚೆನ್ನೈ: ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿನ್ಹೆಗಾಗಿ ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಕ್ರೈ ಬ್ರ್ಯಾಂಚ್ ಪೊಲೀಸರು ಲುಕ್ ಔಟ್ ನೋಟಿಸ್  ಜಾರಿ ಮಾಡಿದ್ದಾರೆ.

ದಿನಕರನ್ ವಿಚಾರಣೆಯಿಂದ ಪಾರಾಗಲು ಪರಾರಿಯಾಗುವ ಶಂಕೆ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು  ಚುನಾವಣಾ ಅಧಿಕಾರಿಗೆ ಲಂಚ ನೀಡಿದ ಪ್ರಕರಣದ ವಿಚಾರಣೆಯನ್ನು ತೀವ್ರ ಗೊಳಿಸಿರುವ ದೆಹಲಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಅತನ  ಸಹಚರರಿಗಾಗಿಯೂ ಬಲೆ ಬೀಸಿದ್ದಾರೆ.

ಇನ್ನು ಇತ್ತೀಚೆಗೆ ದೆಹಲಿಯ ವಿವಿಧೆಡೆ ದಾಳಿ ಮಾಡಿದ್ದ ಅಧಿಕಾರಿಗಳು ದಕ್ಷಿಣ ದೆಹಲಿಯ ಖಾಸಗಿ ಹೊಟೆಲ್ ನ ರೂಂ ಒಂದರಲ್ಲಿ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ನನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ ಆತನಿಂದ 2000  ರು.ನೋಟಿನ ಕಂತೆಗಳಿರುವ ಬ್ಯಾಗ್ ಅನ್ನು ಕೂಡ ವಶ ಪಡಿಸಿಕೊಂಡಿದ್ದರು. ಚಾಂದಿನಿ ಚೌಕ್ ನಲ್ಲಿರುವ ಹವಾಲಾ ದಂಧೆಕೋರರಿಂದ ಸುಖೇಶ್ ಈ ಹಣ ಪಡೆದಿದ್ದಾಗೆ ಹೇಳಿಕೆ ನೀಡಿದ್ದ.  ಈ ಹಣವನ್ನು ಟಿಟಿವಿ ದಿನಕರನ್ ಅವರೇ  ಹವಾಲಾ ದಂಧೆ ಮೂಲಕ ರವಾನಿಸಿದ್ದರು ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ: ವಿಂಡೀಸ್ ವಿರುದ್ಧ ಗೆಲುವು; T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್