ಸಂಗ್ರಹ ಚಿತ್ರ 
ದೇಶ

ಶಶಿಕಲಾ ತಂಡದ ಉಚ್ಛಾಟನೆ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಜಯ: ಪನ್ನೀರ್ ಸೆಲ್ವಂ

ಶಶಿಕಲಾ ಮತ್ತು ಅವರ ತಂಡವನ್ನು ಎಐಎಡಿಎಂಕೆಯಿಂದ ಉಚ್ಛಾಟನೆ ಮಾಡಲು ನಿರ್ಧರಿಸಿರುವುದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದು ತಮಿಳುನಾಡು ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬುಧವಾರ ಹೇಳಿದ್ದಾರೆ.

ಚೆನ್ನೈ: ಶಶಿಕಲಾ ಮತ್ತು ಅವರ ತಂಡವನ್ನು ಎಐಎಡಿಎಂಕೆಯಿಂದ ಉಚ್ಛಾಟನೆ ಮಾಡಲು ನಿರ್ಧರಿಸಿರುವುದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದು ತಮಿಳುನಾಡು ಮಾಜಿ ಸಿಎಂ ಒ ಪನ್ನೀರ್ ಸೆಲ್ವಂ ಬುಧವಾರ ಹೇಳಿದ್ದಾರೆ.

ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಬುಧವಾರ ತೆರೆ ಬೀಳುವ ಸಾಧ್ಯತೆ ಇದ್ದು, ಶಶಿಕಲಾ ಮತ್ತು ಅವರ ತಂಡವನ್ನು ಉಚ್ಛಾಟನೆ ಮಾಡಲು ಎಐಎಡಿಎಂಕೆ ನಿರ್ಧರಿಸಿದೆ. ಈ ನಿರ್ಧಾರ ಹೊರ ಬಿದ್ದ  ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಬಂಡಾಯ ಬಣದ ನಾಯಕ ಒ ಪನ್ನೀರ್ ಸೆಲ್ವಂ ಅವರು ತಮ್ಮ ಹೋರಾಟಕ್ಕೆ ಜಯ ಸಂದಿದ್ದು, ಶಶಿಕಲಾ ಮತ್ತು ಅವರ ತಂಡವನ್ನು ಉಚ್ಛಾಟನೆ ಮಾಡಲಾಗುತ್ತಿದೆ. ಇದೀಗ ನಾವು  ಪರಸ್ಪರರು ಒಟ್ಟಿಗೆ ಕುಳಿತು ಚರ್ಚಿಸಿ ನಮ್ಮಲ್ಲಿನ ಭಿನ್ನಮತಗಳನ್ನು ಬಗೆಹರಿಸಿಕೊಳ್ಳುತ್ತೇವ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಪಕ್ಷವನ್ನು ಕಟ್ಟುತ್ತೇವೆ ಮತ್ತು ಜನರ ಮುಂದೆ ಒಟ್ಟಿಗೆ ಹೋಗಿ ಮತ ಕೇಳುಕ್ಕೇವೆ ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.

ನಿನ್ನೆ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಅವರು ತಮ್ಮ ಪಕ್ಷದ 9 ಮಂದಿ ಹಿರಿಯ ಮುಖಂಡರನ್ನು ಕಳುಹಿಸಿ ಸಂಧಾನ ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ ಇದಕ್ಕೊಪ್ಪದ ಪನ್ನೀರ್ ಸೆಲ್ವಂ ತಾವು  ಸಂಧಾನ ಸಭೆ ಬರಲು ಮೊದಲು ಶಶಿಕಲಾ ಮತ್ತು ತಂಡವನ್ನು ಉಚ್ಛಾಟಿಸಬೇಕು ಎಂಬ ಷರತ್ತು ಒಡ್ಡಿದ್ದರು, ಇದೀಗ ಆ ಷರತ್ತಿಗೆ ಪಳನಿಸ್ವಾಮಿ ಒಪ್ಪಿಗೆ ನೀಡಿದ್ದು, ಇದೇ ಕಾರಣಕ್ಕೆ ಪನ್ನೀರ್ ಸೆಲ್ವಂ ಸಂಧಾನ ಮಾತುಕತೆಗೆ ತೆರಳಲು  ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ