ದೇಶ

ದೇಶದ 200 ಕೇಂದ್ರೀಯ ವಿದ್ಯಾಲಯ, 125 ನವೋದಯ ಶಾಲೆಗಳಿಗೆ ಪ್ರಾಂಶುಪಾಲರೇ ಇಲ್ಲ!

Shilpa D
ನವದೆಹಲಿ: ದೇಶದ 200 ಕೇಂದ್ರೀಯ ವಿದ್ಯಾಲಯಗಳು ಹಾಗೂ 125 ನವೋದಯ ವಿದ್ಯಾಲಯಗಳು ಪ್ರಾಂಶುಪಾಲರಿಲ್ಲದೇ ನಡೆಯುತ್ತಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೇಳಿದೆ.
ಕೇಂದ್ರೀಯ ವಿದ್ಯಾಲಯಗಳ ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು 10ಸಾವಿರ ಶಿಕ್ಷಕರ ಕೊರತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಂಘತಾನ್ ಕೇಂದ್ರೀಯ ವಿದ್ಯಾಲಯ 2015-16ನೇ ಸಾಲಿನ ವರದಿ ಸಲ್ಲಿಸಿದ್ದು, ಅದರಲ್ಲಿ ಈ ಮಾಹಿತಿ ಬಹಿರಂಗವಾಗಿದೆ, ದೇಶದ ಕೇಂದ್ರಿಯ ವಿದ್ಯಾಲಯಗಳಲ್ಲಿ 1,081 ಪ್ರಾಂಶುಪಾಲ ಹುದ್ದೆಗಳಿದ್ದು, ಅದರಲ್ಲಿ 200 ಪೋಸ್ಟ್ ಗಳು ಖಾಲಿಯಿವೆ, ಅದರಂತೆ 113 ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿಯಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೇಂದ್ರೀಯ ವಿದ್ಯಾಲಯಗಳ ಟಿಜಿಟಿ, ಪಿಜಿಟಿ, ಮತ್ತು ಪಿಆರ್ ಟಿ  ಹಾಗೂ ಬೋಧಕ ಹುದ್ದೆಗಳು ಸೇರಿದಂತೆ 10,039 ಪೋಸ್ಟ್ ಗಳು ಖಾಲಿಯಿವೆ, 14,144 ಬೋಧಕೇತರ ಸಿಬ್ಬಂದಿಯ ಹುದ್ದೆಗಳಿಗೆ ಇನ್ನೂ ನೇಮಕವಾಗಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಷ್ಯಾದ ಮಾಸ್ಕೋ, ನೇಪಾಳಜ ಕಠ್ಮಂಡು, ಇರಾನ್ ನ ತೆಹ್ರಾನ್ ಸೇರಿದಂತೆ ಸದ್ಯ ಒಟ್ಟು 1,142 ಕೇಂದ್ರೀಯ ವಿದ್ಯಾಲಯಗಳು ಕೆವಿಎಸ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಇಲ್ಲಿನ ಶಾಲೆಗಳಲ್ಲಿ ರಕ್ಷಣೆ, ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿದಂತೆ ವರ್ಗಾವಣೆಗೊಳ್ಳುವಂತ ಕೇಂದ್ರ ಸರ್ಕಾರದ ಅಧಿಕಾರಿಗಳ ಮಕ್ಕಳಿಗೆ ಸಾಮಾನ್ಯ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ.
50 ಸಾವಿರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಕಳೆದ ತಿಂಗಳು 50 ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪಸಿ 650 ಹುದ್ದೆಗಳಿಗೆ ಅನುಮೋದನೆ ನೀಡಿದೆ. 
ಜವಹರ್ ನವೋದಯ ವಿದ್ಯಾಲಯಗಳಲ್ಲೂ ಸಿಬ್ಬಂದಿ ಕೊರತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜವಹರ್ ನವೋದಯ  ವಿದ್ಯಾಲಯದಲ್ಲಿ 589 ಪ್ರಾಂಶುಪಾಲರ ಪೈಕಿ 125 ಹುದ್ದೆಗಳು ಖಾಲಿಯಿವೆ. ಅದರಲ್ಲಿ 53 ಶಾಲೆಗಳಲ್ಲಿ ಉಪ ಪ್ರಾಂಶುಪಾಲರಿಲ್ಲ, ದೇಶದಲ್ಲಿರುವ ಜವಹರ್ ನವೋದಯ ವಿದ್ಯಾಲಯಗಳಲ್ಲಿ 2,023 ಬೋಧಕ ಸಿಬ್ಬಂದಿ ಹಾಗೂ 1,734 ಬೋಧಕೇತರ ಸಿಬ್ಬಂದಿ ಹುದ್ದೆಗಳು ಖಾಲಿಯಿವೆ ಎಂದು ವರದಿ ತಿಳಿಸಿದೆ. 
SCROLL FOR NEXT