ದೇಶ

ಸಹಾರಾ ಮುಖ್ಯಸ್ಥರ ವಿರುದ್ಧ ಜಾಮೀನುರಹಿತ ವಾರಂಟ್ ರದ್ದುಗೊಳಿಸಿದ ಸೆಬಿ ಕೋರ್ಟ್

Sumana Upadhyaya
ನವದೆಹಲಿ: ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರು ನ್ಯಾಯಾಲಯಕ್ಕೆ ಹಾಜರಾದ ಕಾರಣ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನುರಹಿತ ವಾರಂಟ್ ನ್ನು ಸೆಬಿಯ ವಿಶೇಷ ನ್ಯಾಯಾಲಯ ಇಂದು ತೆಗೆದುಹಾಕಿದೆ.
ನ್ಯಾಯಾಲಯಕ್ಕೆ ಸುಬ್ರತೊ ರಾಯ್ ಎಲ್ಲಾ ವಿಚಾರಣೆಗೆ ಹಾಜರಾಗುವುದರಿಂದ ಸಹ ಅವರ ವಿರುದ್ಧದ ವಾರಂಟ್ ನ್ನು ತೆಗೆದುಹಾಕಲಾಗಿದೆ. ವಿಚಾರಣೆಗೆ ಹಾಜರಾಗುವುದಾಗಿ ಬರೆದುಕೊಡುವಂತೆ ಕೋರ್ಟ್ ಹೇಳಿದೆ.
ಪ್ರಕರಣದ ಮುಂದಿನ ವಿಚಾರಣೆ ಮೇ 18ರಂದು ನಡೆಯಲಿದೆ.ಮೊನ್ನೆ 17ರಂದು ಸುಪ್ರೀಂ ಕೋರ್ಟ್, ಸಹರಾದ ಆಂಬಿ ವ್ಯಾಲಿಯಲ್ಲಿರುವ ಆಸ್ತಿಯನ್ನು ಹರಾಜಿಗಿಡುವಂತೆ ಆದೇಶಿಸಿತ್ತು. ಮತ್ತು ಸುಬ್ರತೊ ರಾಯ್ ಅವರಿಗೆ ಏಪ್ರಿಲ್ 28ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು.
SCROLL FOR NEXT