ಕಣ್ಣೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್'ರನ್ನು ಅವಮಾನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.
ಜೊಬಿನ್ ಪಂಡಾಂಚೆರ್ರಿ ಎಂಬ ಯುವಕನ ವಿರುದ್ದ ಸಿಪಿಎಂ ಕಾರ್ಯಕರ್ತನೊಬ್ಬ ಕೆಲಕಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಜೊಬಿನ್ ಪಂಡಾಂಚೆರ್ರಿ ಸಾಮಾಜಿಕ ಜಾಲತಾಣದಲ್ಲಿ ಪಿಣರಾಯಿ ಅವರನ್ನು ಅವಮಾನಿಸಿ ಫೋಟೋವೊಂದನ್ನು ಹಾಕಿದ್ದಾರೆ. ಫೋಟೋದಲ್ಲಿ ಪಿಣರಾಯಿಯವರು ಪಾದ್ರಿ ಬಟ್ಟೆ ಧರಿಸಿರುವುದು ಕಂಡುಬಂದಿದೆ. ದೂರು ದಾಖಲಾದ ಬಳಿಕ ಜೊಬಿನ್ ಪೋಸ್ಟ್'ನ್ನು ತೆಗೆದು ಹಾಕಿದ್ದಾನೆ. ಮುಖ್ಯಮಂತ್ರಿಗಳಿಗೆ ಅವಮಾನ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡಿದ್ದಾನೆಂದು ಹೇಳಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.