ನಕ್ಸಲರ ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವೀರ ಯೋಧ
ರಾಯ್ಪುರ: ಛತ್ತೀಸ್ಗಢ ಸುಕ್ಮಾ ನಕ್ಸಲರ ಭೀಕರ ದಾಳಿ ಕುರಿತಂತೆ ಗಾಯಾಗೊಂಡು ಚಿಕಿತ್ಸೆ ಪಡೆಯುತ್ತಿರುವ ವೀರ ಯೋಧರೊಬ್ಬರು ದಾಳಿಯ ಭೀಕರತೆಯನ್ನು ಬಹಿರಂಗಪಡಿಸಿದ್ದಾರೆ.
ಛತ್ತೀಸ್ಘಡದ ಸುಕ್ಮಾದ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ 75 ಬೆಟಾಲಿಯನ್ ಪಡೆ ಭದ್ರತೆಯನ್ನು ಒದಗಿಸುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದಿದ್ದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ, ಹಲವು ಯೋಧರಿಗೆ ಗಂಭೀರವಾದ ಗಾಯಗಳಾಗಿವೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿ ಸಿಆರ್ ಪಿಎಫ್ ಪೇದೆ ಶೆರ್ ಮೊಹಮ್ಮದ್ ಕೂಡ ಇದ್ದರು. ದಾಳಿಯಲ್ಲಿ ಮೊಹಮ್ಮದ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿ ಕುರಿತಂತೆ ಮೊಹಮ್ಮದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವು 150 ಜನರಿದ್ದೆವು. ದಾಳಿ ಮಾಡಲು 300 ನಕ್ಸಲರು ಸ್ಥಳಕ್ಕೆ ಬಂದಿದ್ದರು. ಆದರೂ, ಹಿಂಜರಿಯದೆ ಗುಂಡಿನ ದಾಳಿ ನಡೆಸಿದ್ದವು. ನಾನು 3-4 ನಕ್ಸಲರ ಎದೆಗೆ ಗುಂಡು ಹಾರಿಸಿದ್ದೆ.
ಮೊದಲು ಗ್ರಾಮಸ್ಥರನ್ನು ಕಳುಹಿಸಿದ್ದ ನಕ್ಸಲರು ಭದ್ರತಾ ಪಡೆಗಳಿದ್ದ ಸ್ಥಳವನ್ನು ತಿಳಿದುಕೊಂಡಿದ್ದಾರೆ. 300 ನಕ್ಸಲರು ಏಕಾಏಕಿ ನಮ್ಮ ಮೇಲೆ ದಾಳಿ ಮಾಡಿದರು. ಈ ವೇಳೆ ನಾವೂ ಕೂಡ ಪ್ರತಿದಾಳಿ ನಡೆಸಿ ಹಲವು ನಕ್ಸಲರನ್ನು ಹೊಡೆದುರುಳಿಸಿದೆವು ಎಂದು ಯೋಧ ಮೊಹಮ್ಮದ್ ಅವರು ಹೇಳಇದ್ದಾರೆ.
ಮತ್ತೊಬ್ಬ ಯೋಧ ಸೌರಭ್ ಮಲಿಕ್ ಪ್ರತಿಕ್ರಿಯೆ ನೀಡಿದ ನಕ್ಸಲು ನಮ್ಮನ್ನು ಸುತ್ತುವರೆದು ದಾಳಿ ನಡೆಸುವ ಗುರಿ ಹೊಂದಿದ್ದರು. ಆದರೆ, ಯೋಧರು ಗುಂಡಿನ ದಾಳಿ ನಡೆಸಿ ಮುಂದೆ ಹೆಜ್ಜೆಯನ್ನು ಇಡಲು ಆರಂಭಿಸಿದ್ದರಿಂದಾಗಿ ಅವರ ಈ ಪ್ರಯತ್ನ ವಿಫಲವಾಗಿತ್ತು. ಎನ್ ಕೌಂಟರ್ ಸ್ಥಳದಲ್ಲಿ ಯೋಧರ ಶಸ್ತ್ರಾಸ್ತ್ರಗಳನ್ನು ನಕ್ಸಲರು ಹೊತ್ತೊಯ್ದರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos