ಅಹಮದಾಬಾದ್: ವಿಚ್ಛೇದನ ಪಡೆದ ಸಂತೋಷಕ್ಕಾಗಿ ವ್ಯಕ್ತಿಯೊಬ್ಬ 50 ಕೆಜಿ ಕಾಜೂ ಬರ್ಫಿ ಹಂಚಿ ಸಂಭ್ರಮಿಸಿದ ವಿಲಕ್ಷಣ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ರಾಜ್ ಕೋಟ್ ನಿವಾಸಿ 26 ವರ್ಷದ ರಿಂಕೇಶ್ ರಚ್ಚಾ ಎಂಬವರು ದಾಂಪತ್ಯ ಜೀವನದಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸಿದ್ದರು. ಕೊನೆಗೆ ವಿವಾಹ ವಿಚ್ಛೇದನ ಪಡೆದಾಗ, ಆ ಖುಷಿಗಾಗಿ ಸಂಬಂಧಿಕರಿಗೆ ಮತ್ತು ಗೆಳೆಯರಿಗೆ 50 ಕೆಜಿ ಕಾಜೂ ಬರ್ಫಿ ಹಂಚಿ ಸಂಭ್ರಮಿಸಿದ್ದಾರೆ. ಸ್ಟೀಟ್ ಬಾಕ್ಸ್ ಮೇಲೆ ವಿಚ್ಛೇದನದ ಸಂಭ್ರಮಾಚರಣೆ ಎಂದು ಬರೆಯಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಒಂದು ವರ್ಷದ ದಾಂಪತ್ಯದಲ್ಲಿ ತುಂಬಾ ನೋವು , ನಂತರ ವಿವಾಹ ವಿಚ್ಛೇದನಕ್ಕಾಗಿ ಎರಡು ವರ್ಷ ಕಾನೂನು ಹೋರಾಟ ನಡೆಸಿದೆ. ಇದೆಲ್ಲಾ ಮುಗಿದ ಮೇಲೆ ಸಂಭ್ರಮಿಸಲೇ ಬೇಕಲ್ಲವೇ ಎಂದು ಆತ ಹೇಳಿದ್ದಾರೆ.
ನನ್ನ ಕುಟುಂಬವನ್ನು ಬಿಟ್ಟು ಪ್ರತ್ಯೇಕವಾಗಿ ಮನೆ ಮಾಡಬೇಕೆಂದು ನನ್ನ ಹೆಂಡತಿ ಪಟ್ಟು ಹಿಡಿದಿದ್ದು, ನಮ್ಮ ನಡುವಿನ ಜಗಳಕ್ಕೆ ಇದೇ ಕಾರಣವಾಗಿತ್ತು. ನಾನು ವಿಚ್ಛೇದನ ಪಡೆಯಲು ಮುಂದಾದಾಗ, ಮಹಿಳೆಯರ ಪರವಾಗಿರುವ ಕಾನೂನು ಹೇಗಿದೆ ಎಂಬುದು ನನಗೆ ಮನವರಿಕೆಯಾಯಿತು. ವಿಚ್ಛೇದನದ ಪ್ರಕ್ರಿಯೆಯಲ್ಲಿ ಪತ್ನಿಗೆ ಜೀವನಾಂಶ ನೀಡುವುದಕ್ಕಾಗಿ ನಾನು ತುಂಬಾ ಕಷ್ಟಪಟ್ಟೆ, ಉತ್ತಮ ವಕೀಲರು ವಾದಿಸಿದ್ದರೂ, ವಿಚ್ಛೇದನ ಪಡೆಯಲು 2 ವರ್ಷ ಬೇಕಾಯಿತು ಎಂದು ಅವರು ಬರೆದಿದ್ದಾರೆ.
ಸ್ವೀಟ್ ಬಾಕ್ಸ್ ಮೇಲೆ ಅವರ ಫೋನ್ ನಂಬರ್ ಮತ್ತು ತಮ್ಮ ಕುಟುಂಬಸ್ಥರ ಹೆಸರು ನಮೂದಿಸಿದ್ದಾರೆ, ಆದರೆ ಎಲ್ಲಿಯೂ ಮಾಜಿ ಪತ್ನಿಯ ವಿವರಗಳನ್ನು ಬಹಿರಂಗಪಡಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics