ಭಾರತ, ಪೋಲ್ಯಾಂಡ್ ನಡುವೆ ಕೃಷಿ ಒಪ್ಪಂದ
ವಾರ್ಸಾ: ಕೃಷಿ ಕ್ಷೇತ್ರದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ವಿನಿಮಯದ ಒಪ್ಪಂದಕ್ಕೆ ಭಾರತ-ಪೋಲ್ಯಾಂಡ್ ಸಹಿ ಹಾಕಿವೆ.
ಸಣ್ಣ ಕೈಗಾರಿಕೆ ಸಚಿವ ಗಿರಿರಾಜ್ ಸಿಂಗ್ ಒಪ್ಪಂದಕ್ಕೆ ಸಹಿ ಹಾಕಿದ್ದು, ವ್ಯಪಾರ ವಹಿವಾಟುಗಳ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ. ಪೋಲ್ಯಾಂಡ್ ಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ನೀಡಿದ್ದು, ಅಲ್ಲಿನ ಪ್ರಧಾನಿ ಬೀಟಾ ಎಸ್ಜೆಡ್ಲೋ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಕೃಷಿ ಕ್ಷೇತ್ರಕ್ಕೆ ಸಂಬಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಗಣಿಗಾರಿಕ ಹಾಗೂ ಆಹಾರ ಸಂಸ್ಕರಣೆ ಹಾಗೂ ರಕ್ಷಣೆಗೆ ಸಂಬಧಿಸಿದಂತೆ ಉಭಯ ರಾಷ್ಟ್ರಗಳೂ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲಿವೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪೋಲ್ಯಾಂಡ್ ಗೆ ಮೂರು ದಿನಗಳ ಪ್ರವಾಸದಲ್ಲಿದ್ದು, ಪೋಲ್ಯಾಂಡ್ ರಾಷ್ಟ್ರಪತಿ ಆಂಡ್ರೆಜ್ ದುದಾ ಅವರನ್ನು ಭೇಟಿ ಮಾಡಲಿದ್ದಾರೆ.
ಪೋಲ್ಯಾಂಡ್ ನಲ್ಲಿ ಇಂದು ನಡೆಯಲಿರುವ ಬ್ಯುಸಿನೆಸ್ ಫೋರಂ ನಲ್ಲಿ ಹಮೀದ್ ಅನ್ಸಾರಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.