ನವದೆಹಲಿ: 2017ರ ಜಂಟಿ ಪ್ರವೇಶ ಪರೀಕ್ಷೆ(ಜೆಇಇ)ಯ ಮುಖ್ಯ ಪರೀಕ್ಷೆಯಲ್ಲಿ ರಾಜಸ್ಥಾನದ ಉದಯಪುರದ, ಕಾಂಪೌಂಡರೊಬ್ಬರ ಮಗ ಶೇ.100ರಷ್ಟು ಅಂಕ ಪಡೆಯುವ ಮೂಲಕ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಪೌಂಡರ್ ಪುತ್ರ ಕಲ್ಪಿತ್ ವೀರವಾಲ್ ಅವರು 360ಕ್ಕೆ 360 ಅಂಕಗಳನ್ನು ಪಡೆದಿದ್ದಾರೆ. ಉದಯಪುರದ ಎಂಡಿಎಸ್ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿರುವ ಕಲ್ಪಿತ್ ಅವರು, ವರ್ಷವಿಡಿ ಯಾವ ಒಂದು ಕ್ಲಾಸ್ ಸಹ ತಪ್ಪಿಸಿಲ್ಲವಂತೆ.
ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಪಿತ್ ಅವರು, 360ಕ್ಕೆ 360 ಅಂಗ ಗಳಿಸುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್‌ಇ) ಅಧ್ಯಕ್ಷರಾಗಿರುವ ಆರ್ ಕೆ ಚತುರ್ವೇದಿ ಅವರು ಉದಯಪುರದಿಂದ ನನಗೆ ಫೋನ್ ಮಾಡಿ, ನಾನು ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ ವಿಭಾಗದಲ್ಲಿ ಟಾಪರ್ ಆಗಿರುವುದಾಗಿ ತಿಳಿಸಿದ್ದಾರೆ; ಪರೀಕ್ಷೆಯಲ್ಲಿ 360ರಲ್ಲಿ 360 ಅಂಕಗಳನ್ನು ನಾನು ಪಡೆದಿರುವುದಾಗಿ ತಿಳಿಸಿ ಅಭಿನಂದಿಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜೆಇಇ ಮೇನ್ಸ್‌ನಲ್ಲಿ ನಾನು ಟಾಪರ್ ಆಗಿರುವುದು ನನಗೆ ಅತ್ಯಂತ ಸಂತಸದ ವಿಷಯವಾಗಿದೆ. ಆದರೆ ನಾನಿದನ್ನು ಈಗ ಮಾಮೂಲಿಯಾಗಿ ಕಾಣುತ್ತಿದ್ದೇನೆ; ಕಾರಣ ನಾನೀಗ ಮುಂದಿನ ತಿಂಗಳು ನಡೆಯಲಿರುವ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯ ಮೇಲೆ ದೃಷ್ಟಿ ನೆಟ್ಟಿದ್ದೇನೆ' ಎಂದು ಕಲ್ಪಿತ್ ವೀರವಾಲ್ ಹೇಳಿದ್ದಾರೆ.