ನವದೆಹಲಿ: ಜಾರಿ ನಿರ್ದೇಶನಾಲಯಕ್ಕೆ ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ನೀಡಬೇಕೆಂದು ಇಡಿ ಮುಖ್ಯಸ್ಥ ಕರ್ನಲ್ ಸಿಂಗ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನ್ಯಾಯಾಲಯಗಳು ಪ್ರಕರಣಗಳನ್ನು ವಜಾಗೊಳಿಸಿದರೂ ಸಹ ಪ್ರಕರಣಗಳನ್ನು ಸ್ವತಂಟ್ರವಾಗಿ ನಿರ್ವಹಿಸುವ ಸ್ಥಾನಮಾನ ನೀಡಬೇಕೆಂಬುದು ಇಡಿ ಮುಖ್ಯಸ್ಥ ಕರ್ನಲ್ ಸಿಂಗ್ ಅವರ ಮುಖ್ಯ ಬೇಡಿಕೆಯಾಗಿದೆ. ಇಡಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಲ್ ಸಿಂಗ್, ಜಾರಿ ನಿರ್ದೇಶನಾಲಯ ಸತತವಾಗಿ ಸಮಸ್ಯೆಗಳನ್ನು ಎದುರಿಸುತ್ತಿದೆ, ಅದು ಬದಲಾಗಬೇಕಿದ್ದು, ಸಂಸ್ಥೆಗೆ ಸ್ವಾಯತ್ತತೆ ನೀಡಬೇಕಿದೆ ಎಂದು ಮನವಿ ಮಾಡಿದ್ದಾರೆ.
ನ್ಯಾಯಾಲಯಗಳು ವಜಾಗೊಳಿಸಿದರೂ ಸಹ ಇಡಿ ದಾಖಲಿಸಿದ್ದ ಪ್ರಕರಣಗಳು ವ್ಯರ್ಥವಾಗುತ್ತವೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಸ್ವಾಯತ್ತತೆ ನೀಡಬೇಕಾದ ಅಗತ್ಯವಿದೆ ಎಂದು ಕರ್ನಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.