ದೇಶ

ಮಹಾದಾಯಿ ವಿವಾದ: ಕರ್ನಾಟಕ ಪರಿಸರದ ಮೇಲೆ ಬಾಂಬ್ ಹಾಕುತ್ತಿದೆ ಎಂದ ಗೋವಾ ಸಿಎಂ

Lingaraj Badiger
ಪಣಜಿ: ನೆರೆಯ ರಾಜ್ಯಗಳೊಂದಿಗಿನ ಮಹಾದಾಯಿ ವಿವಾದವನ್ನು ಪಕ್ಷದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಕರ್ನಾಟಕ ಮಹಾದಾಯಿ ನದಿಗೆ ಡ್ಯಾಮ್ ಗಳನ್ನು ನಿರ್ಮಿಸುವ ಮೂಲಕ ಪರಿಸರದ ಮೇಲೆ ಬಾಂಬ್ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಮಹಾದಾಯಿ ನದಿ ವಿವಾದದ ಕುರಿತು ಇಂದು ವಿಧಾಸಭೆಯಲ್ಲಿ ಮಾತನಾಡಿದ ಗೋವಾ ಸಿಎಂ, ನದಿ ನೀರಿನ ವಿವಾದವನ್ನು ನಿಭಾಯಿಸಲು ರಾಜ್ಯ ಸರ್ಕಾರ ಕೆಲವು ಕಾರ್ಯತಂತ್ರಗಳನ್ನು ಹೊಂದಿದೆ ಎಂದು ಹೇಳಿದರು.
ಪಣಜಿ ಬಳಿ ಅರೇಬಿಯನ್ ಸಮುದ್ರ ಸೇರುವ ಮಹಾದಾಯಿ ನದಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ಯೋಜನೆ ಸಿದ್ಧಪಡಿಸಿವೆ. ಆದರೆ ಇದಕ್ಕೆ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ ರಾಜ್ಯದ ಕರಾವಳಿಯ ಪರಿಸರಕ್ಕೆ ಹಾನಿಯಾಗಲಿದೆ ಎಂದು ಗೋವಾ ಸಿಎಂ ಸದನಕ್ಕೆ ತಿಳಿಸಿದರು.
ಕರ್ನಾಟಕ ಮಹಾದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಮೂಲಕ ಕನಿಷ್ಟ ಏಳು ಅಣೆಕಟ್ಟುಗಳು ಮತ್ತು ಮೂರು ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ ಎಂದು ಪರಿಕ್ಕರ್ ಹೇಳಿದ್ದಾರೆ.
SCROLL FOR NEXT