ಖ್ಯಾತ ವಿಜ್ಞಾನಿ ಪುಷ್ಪಾ ಮಿತ್ರ ಭಾರ್ಗವ (ಸಂಗ್ರಹ ಚಿತ್ರ)
ಹೈದರಾಬಾದ್: ಸಿಎಸ್ಐಆರ್ ಸೆಂಟರ್ ಫಾರ್ ಸೆಕ್ಯುಲರ್ ಮಾಲಿಕ್ಯುಲರ್ ಬಯೋಲಜಿ ಸ್ಥಾಪಕ ನಿರ್ದೇಶಕ, ಖ್ಯಾತ ವಿಜ್ಞಾನಿ ಪುಷ್ಪಾ ಮಿತ್ರ ಭಾರ್ಗವ (88) ಮಂಗಳವಾರ ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭಾರ್ಗವ ಅವರು ನಿನ್ನೆ ಸಂಜೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಪಿ.ಎಂ.ಭಾರ್ಗವ ಅವರು 1970ರ ದಶಕದಲ್ಲಿ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಅಗ್ರಗಣ್ಯ ವಿಜ್ಞಾನಿ ಎನಿಸಿದ್ದರು. ಬಯೋಟೆಕ್ನಾಲಜಿಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರಾಜಸ್ಥಾನದ ಅಜ್ಮೇರ್ ನಲ್ಲಿ ಜನಿಸಿದ ಅವರು 2005-07ರ ಅವಧಿಯಲ್ಲಿ ರಾಷ್ಟ್ರೀಯ ಜ್ಞಾನ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅಸಹಿಷ್ಣುತೆ ವಿರೋಧಿಸಿ ಪದ್ಮ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.