ಬನಾಸ್ ಕಾಂತಾ(ಗುಜರಾತ್): ಗುಜರಾತ್ ನ ಬನಾಸ್ ಕಾಂತಾ ಜಿಲ್ಲೆಯ ಪ್ರವಾಹ ಪೀಡಿತ ಧನೇರಾಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ರಾಹುಲ್ ಗಾಂಧಿ ಧನೇರಾಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಕರಿ ಬಾವುಟ ತೋರಿಸಿ ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಕೂಗಿದರು. ಇದರಿಂದ ಕುಪಿತರಾದ ಅವರು ಮರಳುವ ವೇಳೆ ಕಾರಿಗೆ ಕಲ್ಲೆಸೆಯಲಾಗಿದ್ದು ಕಾರಿನ ಕಿಟಕಿ ಗಾಡುಗಳಿಗೆ ಹಾನಿಯಾಗಿದೆ.
ಧನೇರಾ ಪಟ್ಟಣದ ಲಾಲ್ ಚೌಕ್ ಗೆ ಆಗಮಿಸುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ನೂರಾರು ಜನರು ಕರಿ ಬಾವುಟ ತೋರಿಸಿದ್ದು ಅಲ್ಲದೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದು ಲಾಠೀ ಚಾರ್ಚ್ ಮಾಡಿ ಉದ್ರಿಕ್ತ ಜನರ ಗುಂಪನ್ನು ಚದುರಿಸಲಾಯಿತು ಎಂದು ಬನಸ್ಕಾಂತದ ಪೊಲೀಸ್ ವರಿಷ್ಠಾಧಿಕಾರಿ ನೀರ್ಜಾ ಬಾದ್ಗುಜಾರ್ ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಶೇಕ್ ಮನು ಸಿಂಗ್ವಿ ಅವರು ಇದೆಲ್ಲಾ ಬಿಜೆಪಿ ಗೂಂಡಾಗಳ ಕೆಲಸ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಮೊದಲಿಗೆ ರಾಜಸ್ಥಾನದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಂದ ಗುಜರಾತ್ ನ ಧನೇರಾಗೆ ಆಗಮಿಸಿದ್ದರು.