ಹರಿದ್ವಾರ: ಡೋಕ್ಲಾಮ್ ಗಡಿ ಬಿಕ್ಕಟ್ಟು ಕುರಿತಂತೆ ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿರುವ ನಡುವಲ್ಲೇ, ಚೀನಾದ ಉತ್ಪನ್ನಗಳನ್ನು ಪ್ರತೀಯೊಬ್ಬ ಭಾರತೀಯನೂ ಬಹಿಷ್ಕರಿಸಬೇಕೆಂದು ಯೋಗ ಗುರು ಬಾಬಾ ರಾಮ್'ದೇವ್ ಅವರು ಶನಿವಾರ ಕರೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಚೀನಾ ಪಾಕಿಸ್ತಾನದ ಭಯೋತ್ಪಾದನೆಗೆ ಬಹಿರಂಗವಾಗಿಯೇ ಬೆಂಬಲವನ್ನು ನೀಡುತ್ತಿದೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುವ ಅಗತ್ಯವಿದೆ. ಮೊದಲಿಗೆ ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಮ್ಮ ವಶಕ್ಕೆ ಪಡೆದುಕೊಳ್ಳಬೇಕು. ನಂತರ ಪ್ರತೀಯೊಬ್ಬ ಭಾರತೀಯನೂ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.
ಭಾರತ ಹಾಗೂ ಚೀನಾ ನಡುವೆ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು, ರಾಜಕೀಯವನ್ನು ಬದಿಗಿಟ್ಟು ನಮ್ಮ ರಾಜಕೀಯ ಪಕ್ಷಗಳು ಕೈಜೋಡಿಸಬೇಕಿದೆ. ಚೀನಾ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸಬೇಕಿದೆ. ಸಾರ್ವಜನಿಕರು ಚೀನಾ ವಸ್ತುಗಳನ್ನು ಖರೀದಿಸಬಾರದು ಎಂದು ತಿಳಿಸಿದ್ದಾರೆ.