ಡಿಫೆನ್ಸ್ ಎಕ್ಸ್ಪೋ-2018 ಆಯೋಜನೆಗೆ ಗೋವಾ ಸಿದ್ಧಗೊಂಡಿದೆ: ಮನೋಹರ್ ಪರಿಕ್ಕರ್
ಮುಂದಿನ ವರ್ಷದ ಡಿಫೆನ್ಸ್ ಎಕ್ಸ್ಪೋ ಆಯೋಜನೆಗೆ ಗೋವಾ ಸರ್ಕಾರ ಸಿದ್ಧಗೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪಣಜಿ: ಮುಂದಿನ ವರ್ಷದ ಡಿಫೆನ್ಸ್ ಎಕ್ಸ್ಪೋ ಆಯೋಜನೆಗೆ ಗೋವಾ ಸರ್ಕಾರ ಸಿದ್ಧಗೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ರಕ್ಷಣಾ ಸಚಿವಾಲಯ ದ್ವೈವಾರ್ಷಿಕವಾಗಿ ಆಯೋಜಿಸುವ ಡಿಫೆನ್ಸ್ ಎಕ್ಸ್ಪೋ ಕಾರ್ಯಕ್ರಮವನ್ನು ಕಳೆದ ವರ್ಷ ಗೋವಾದ ನಾಕ್ವೆರಿ-ಕ್ವಿಟೋಲ್ ನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಡಿಫೆನ್ಸ್ ಎಕ್ಸ್ಪೋ ಕಾರ್ಯಕ್ರಮ ಆಯೋಜಿಸಲು ಗೋವಾ ಸರ್ಕಾರ ಸಿದ್ಧಗೊಂಡಿದೆ ಎಂದು ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರಾದರೂ ನಾಕ್ವೆರಿ-ಕ್ವಿಟೋಲ್ ದಲ್ಲಿ ಎಕ್ಸ್ಪೋ ಆಯೋಜನೆಗೊಳ್ಳಲಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಡಿಫೆನ್ಸ್ ಎಕ್ಸ್ಫೋ 2018 ಗೋವಾದಲ್ಲಿ ನಡೆಯಲಿದೆ ಎಂಬುದಷ್ಟೇ ತೀರ್ಮಾನವಾಗಿದೆ ಎಂದಷ್ಟೇ ಪರಿಕ್ಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಡಿಫೆನ್ಸ್ ಎಕ್ಸ್ಫೋ ಕಾರ್ಯಕ್ರಮದಲ್ಲಿ ರಕ್ಷಣಾ ಉತ್ಪನ್ನಗಳು ಪ್ರದರ್ಶನಗೊಳ್ಳಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.