ದೇಶ

ನಾಯ್ಡುರನ್ನು ಉಪರಾಷ್ಟ್ರಪತಿ ಸ್ಥಾನದಲ್ಲಿ ನೋಡುತ್ತಿರುವುರು ರಾಜ್ಯಸಭೆಯ ಸಾಧನೆ: ಜೆಡಿಯು

Manjula VN
ನವದೆಹಲಿ: ಆಡಳಿತಾರೂಢ ಎನ್'ಡಿಎ ಪಕ್ಷದ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು 13ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದನ್ನು ಸಂಯುಕ್ತ ಜನತಾ ದಳ (ಜೆಡಿಯು) ಭಾನುವಾರ ಸ್ವಾಗತಿಸಿದೆ. 
ಈ ಕುರಿತಂತೆ ಮಾತನಾಡಿರುವ ಜೆಡಿಯು ನಾಯಕ ಶರದ್ ಯಾದವ್ ಅವರು ,ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವೆಂಕಯ್ಯ ನಾಯ್ಡು ಅವರು ಗೆಲವು ಸಾಧಿಸಿರುವುದಕ್ಕೆ ಈ ಮೂಲಕ ಶುಭಾಶಯಗಳನ್ನು ಹೇಳಲು ಇಚ್ಛಿಸುತ್ತೇನೆ. ನಾಯ್ಡು ಅವರು ರಾಜ್ಯಸಭೆಯ ಹಳೆಯ ಸದಸ್ಯರಾಗಿದ್ದು, ನಾಯ್ಡು ಅವರನ್ನು ಇಂತಹ ಉನ್ನತ ಸ್ಥಾನದಲ್ಲಿ ನೋಡುತ್ತಿರುವುದು ರಾಜ್ಯಸಭೆಯ ಸಾಧನೆಯಾಗಿದೆ ಎಂದು ಹೇಳಿದ್ದಾರೆ. 
ಇದರಂತೆ ಜೆಡಿಯು ಮತ್ತೊಬ್ಬ ನಾಯಕ ಕೆ.ಸಿ ತ್ಯಾಗಿಯವರೂ ಕೂಡ ನಾಯ್ಡು ಅವರಿಗೆ ಶುಭಾಶಯಗಳನ್ನು ಹೇಳಇದ್ದು, ಆರಂಭದಿಂದಲೂ ಈ ಫಲಿತಾಂಶವನ್ನು ನಿರೀಕ್ಷಿಸಿದ್ದೆವು ಎಂದು ತಿಳಿಸಿದ್ದಾರೆ. 
ಉಪರಾಷ್ಟ್ರಪತಿ ಆಯ್ಕೆಗೆ ನಿನ್ನೆ ನಡೆದ ಮತದಾನದಲ್ಲಿ ಶೇ.98.21ರಷ್ಟು ಮತದಾನವಾಗಿತ್ತು. ಒಟ್ಟು 785 ಸಂಸದರ ಪೈಕಿ 771 ಮಂದಿ ಮತದಾನ ಮಾಡಿದ್ದರು. ಯುಪಿಎ ಅಭ್ಯರ್ಥಿ ಗೋಪಾಲ್ ಕೃಷ್ಣ ಗಾಂಧಿಯವರ ವಿರುದ್ಧ ಸ್ಪರ್ಧಿಸಿದ್ದ ವೆಂಕಯ್ಯ ನಾಯ್ಡು ಅವರಿಗೆ 516 ಮತಗಳು ದೊರೆತಿದ್ದರೆ, ಪರಾಜಿತ ಅಭ್ಯರ್ಥಿ ಗೋಪಾಲ್ ಅವರಿಗೆ 244 ಮತಗಳನ್ನು ಪಡೆದಿದ್ದರು. ಇದರಂತೆ ದೇಶದ 13ನೇ ಉಪರಾಷ್ಟ್ರಪತಿಯಾಗಿ ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯನಾಯ್ಡು ಅವರು ಆಯ್ಕೆಯಾದರು. 
SCROLL FOR NEXT