ಪಾಟ್ನಾ: ರಕ್ಷಾ ಬಂಧನವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಡಿಸಿಎಂ ಸುಶೀಲ್ ಕುಮಾರ್ ಮೋದಿ ವಿನೂತನವಾಗಿ ಆಚರಿಸಿದ್ದು, ಮರಗಳಿಗೆ ರಾಕಿ ಕಟ್ಟಿದ್ದಾರೆ.
ಹಸಿರನ್ನು ಉಳಿಸುವ ಸಂದೇಶ ರವಾನೆ ಮಾಡುವ ನಿಟ್ಟಿನಲ್ಲಿ ಸಿಎಂ ಹಾಗೂ ಡಿಸಿಎಂ ಮರಗಳಿಗೆ ರಾಕಿ ಕಟ್ಟಿದ್ದು, ಹಸಿರನ್ನು ಉಳಿಸುವಂತೆ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಹಸಿರು ಪದರವನ್ನು ಹೆಚ್ಚಿಸುವುದಕ್ಕೆ ಮರಗಳನ್ನು ಹೆಚ್ಚು ಬೆಳೆಸಿ, ಇದು ಸಕಾರಾತ್ಮಕ ಬದಲಾವಣೆಯಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಭೂಮಿಯನ್ನು ಉಳಿಸುವುದಕ್ಕೆ ಸರ್ಕಾರ ಕೈಗೊಂಡಿರುವ ಗ್ರೀನ್ ಡ್ರೈವ್ ಅಭಿಯಾನದ ಜೊತೆಗೆ ಜನತೆ ಕೈಜೋಡಿಸಬೇಕಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ರಾಜ್ಯದ ಅರಣ್ಯ ಪ್ರದೇಶವನ್ನು ಶೇ.17ಕ್ಕೆ ಹೆಚ್ಚಿಸಲು ಬಿಹಾರ ಸರ್ಕಾರ ಗ್ರೀನ್ ಡ್ರೈವ್ ಅಭಿಯಾನ ಕೈಗೊಂಡಿದೆ.