ದೇಶ

ಬಿಜೆಪಿ ಯುವ ಘಟಕದಿಂದ ಯುನೈಟ್ ಇಂಡಿಯ ಅಭಿಯಾನ

Srinivas Rao BV
ನವದೆಹಲಿ: ಬಿಜೆಪಿ ಯುವ ಘಟಕ ಯುನೈಟ್ ಇಂಡಿಯಾ ಎಂಬ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಮೂವ್ಮೆಂಟ್) ನ 75 ನೇ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಯುವ ಘಟಕ ಈ ಅಭಿಯಾನವನ್ನು ಹಮ್ಮಿಕೊಂಡಿದೆ. 
ಭಾರತೀಯ ಜನತಾ ಪಕ್ಷದ ಯುವ ಘಟಕದ ಪ್ರಕಟಣೆಯ ಪ್ರಕಾರ, ನವದೆಹಲಿಯಲ್ಲಿ ಆ.09 ರಂದು ಅಭಿಯಾನ ಪ್ರಾರಂಭವಾಗಲ್ಲಿದೆ. ಒಂದೇ ಭಾರತ ಶ್ರೇಷ್ಠ ಭಾರತ ಅಡಿಬರಹ ನೀಡಲಾಗಿದ್ದು, ಪ್ರತ್ಯೇಕತಾವಾದಿಗಳು ಹಾಗೂ ರಾಷ್ಟ್ರವಿರೋಧಿಗಳಿಗೆ ಸಂದೇಶ ನೀಡುವುದೂ ಸಹ ಯುನೈಟ್ ಇಂಡಿಯಾ ಅಭಿಯಾನದ ಉದ್ದೇಶವಾಗಿದೆ. 
ಆ.09 ರಿಂದ ಆ.15 ರ ವರೆಗೆ ಅಭಿಯಾನ ಹಮ್ಮಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷಕ್ಕೆ ಸೂಚನೆ ನೀಡಿ, ಸಂಕಲ್ಪ ಯಾತ್ರೆಯನ್ನು ಕೈಗೊಳ್ಳುವುದಕ್ಕೆ ಸೂಚಿಸಿದ್ದರು.
SCROLL FOR NEXT