ಶಂಕರ್ ಸಿಂಗ್ ವಘೇಲಾ ಮತ್ತು ದಿಗ್ವಿಜಯ್ ಸಿಂಗ್ 
ದೇಶ

ಹಳೇಯ ಚೇಲಾಗಳಗೆ ಬೆಂಬಲ ಬೇಡ, ಕಾಂಗ್ರೆಸ್ ನಿಮಗಾಗಿ ಏನೆಲ್ಲಾ ಮಾಡಿದೆ ನೆನಸಿಕೊಳ್ಳಿ: ವಘೇಲಾಗೆ ದಿಗ್ವಿಜಯ್

ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರಿಗೆ ಮತ ನೀಡಬೇಕೆಂದು ದಿಗ್ವಿಜಯ್ ಸಿಂಗ್ ಪಕ್ಷದ ಹಿರಿಯ ಮುಖಂಡ ಶಂಕರ್ ಸಿಂಗ್...

ನವದೆಹಲಿ: ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರಿಗೆ ಮತ ನೀಡಬೇಕೆಂದು ದಿಗ್ವಿಜಯ್ ಸಿಂಗ್ ಪಕ್ಷದ ಹಿರಿಯ ಮುಖಂಡ ಶಂಕರ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, ಜಾತಿ ವಿಷಯ ಕೆದಕಿದ್ದಾರೆ. ನೀವೂ ಒಬ್ಬ ರಜಪೂತ್, ದಯವಿಟ್ಟು ಅಹಮದ್ ಬಾಯ್ ಗೆಲುವಿಗಾಗಿ ಮತ ನೀಡಿ, ಕಾಂಗ್ರೆಸ್ ಪಕ್ಷ ನಿಮಗಾಗಿ ಏನೆಲ್ಲಾ ಮಾಡಿದೆ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಟ್ಟೀಟ್ ಮಾಡಿದ್ದಾರೆ.
ಏನೆ ಸಮಸ್ಯೆಗಳಿದ್ದರೂ ಪಕ್ಷದ ಒಳಗೆ ಅದನ್ನು ಚರ್ಚಿಸಿ ಬಗೆ ಹರಿಸಿಕೊಳ್ಳೋಣ. ಇಡೀ ವಿಶ್ವವನ್ನೇ  ರೈಡ್ ಮಾಡಬೇಕೆಂದಿರುವ ನಿಮ್ಮ ಹಳೇಯ ಚೇಲಾವನ್ನು ಬೆಂಬಲಿಸಬೇಡಿ ಎಂದು ಹೇಳಿದ್ದಾರೆ.
ಆದರೆ ಸಿಂಗ್ ಅವರ ಮನವಿಯನ್ನು ತಿರಸ್ಕರಿಸಿರುವ ವಘೇಲಾ ತಾವು ಅಹ್ಮದ್ ಪಟೇಲ್ ಗೆ ಮತ ನೀಡಿಲ್ಲ ಎಂದು ಹೇಳಿದ್ದಾರೆ. ಈ ಚುನಾವಣೆಯ ಫಲಿತಾಂಶ ಇಡೀ ದೇಶದ ಮೇಲೆ ಪರಿಣಾಮ ಬೀರಲಿದೆ. ನಾನು ಈ ಮೋದಲೇ ಕಾಂಗ್ರೆಸ್ ಗೆ ವಿವರಿಸಿದ್ದೆ, ನನ್ನ ಮಾತನ್ನು ಕೇಳಲಿಲ್ಲ, ಹೀಗಾಗಿ ನಾನು ಕಾಂಗ್ರೆಸ್ ತೊರೆದೆ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ, ಹೀಗಾಗಿ ನಾನು ಕಾಂಗ್ರೆಸ್ ಗೆ ಮತ ನೀಡಲು ಸಾಧ್ಯವಿಲ್ಲ ಎಂದು ವಘೇಲಾ ತಿಳಿಸಿದ್ದಾರೆ.
ಕಾಂಗ್ರೆಸ್ ನ ಎಲ್ಲಾ 44 ಶಾಸಕರು ಕಾಂಗ್ರೆಸ್ ಗೆ ಮತ ಚಲಾಯಿಸುತ್ತಾರೆ ಎಂಬ ನಂಬಿಕೆಯಿಲ್ಲ, ಅವರು ಕ್ರಾಸ್ ವೊಟಿಂಗ್ ಮಾಡುವ  ಸಾಧ್ಯತೆಯಿರುತ್ತದೆ, ಕಾಂಗ್ರೆಸ್ ಜಯ ಗಳಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ತಾವು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿರುವ ಬಗ್ಗೆಯೂ ವಘೇಲಾ ಸ್ಪಷ್ಟಪಡಿಸಿಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೇರಿ ಮೂರು ವಿಧೇಯಕಕ್ಕೆ ಸೋಲು!

ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

'ನಾನೇನು ಭಯೋತ್ಪಾದಕನಾ?': ಕಾಂಗ್ರೆಸ್ ನಾಯಕ Pawan Khera ಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆ, 'ಸುಪ್ರೀಂ' ನಕಾರಾ

ಕೆಲ 'ಒತ್ತಡ'ಗಳಿಂದಾಗಿ Siddaramaiah 'ಅಸಹಾಯಕ ಪರಿಸ್ಥಿತಿ'ಯಲ್ಲಿದ್ದಾರೆ, ಡಿಕೆಶಿ ಹಾದಿ ತಪ್ಪುತ್ತಿದ್ದಾರೆ: ಕಾಂಗ್ರೆಸ್ ಶಾಸಕ KN Rajanna ಹೊಸ ಬಾಂಬ್!

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ, ಮಹತ್ವದ ತೀರ್ಪು!

SCROLL FOR NEXT