ಸಂಗ್ರಹ ಚಿತ್ರ 
ದೇಶ

ಡೋಕ್ಲಾಮ್ ಚೀನಾಗೆ ಸೇರಿದ್ದು: ಉಲ್ಟಾ ಹೊಡೆದ ಭೂತಾನ್?

ವಿವಾದಿತ ಡೋಕ್ಲಾಮ್ ಪ್ರದೇಶ ಸಂಬಂಧ ಒಂದೆಡೆ ಭೂತಾನ್'ಗೆ ಬೆಂಬಲ ವ್ಯಕ್ತಪಡಿಸಿ ಭಾರತ ಚೀನಾ ರಾಷ್ಟ್ರವನ್ನು ಎದುರು ಹಾಕಿಕೊಳ್ಳುತ್ತಿದ್ದರೆ, ಮತ್ತೊಂಡೆದೆ ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ...

ಬೀಜಿಂಗ್: ವಿವಾದಿತ ಡೋಕ್ಲಾಮ್ ಪ್ರದೇಶ ಸಂಬಂಧ ಒಂದೆಡೆ ಭೂತಾನ್'ಗೆ ಬೆಂಬಲ ವ್ಯಕ್ತಪಡಿಸಿ ಭಾರತ ಚೀನಾ ರಾಷ್ಟ್ರವನ್ನು ಎದುರು ಹಾಕಿಕೊಳ್ಳುತ್ತಿದ್ದರೆ, ಮತ್ತೊಂಡೆದೆ ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ ಎಂದು ಚೀನಾದ ರಾಜತಾಂತ್ರಿಕ ಅಧಿಕಾರಿಣಿ ವಾಂಗ್ ವೆನ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. 
ಡೋಕ್ಲಾಮ್ ವಿವಾದ ಸಂಬಂಧ ಭಾರತೀಯ ಪತ್ರಕರ್ತರ ಜೊತೆಗೆ ಮಾತನಾಡಿರುವ ಅವರು, ವಿವಾದಿತ ಡೋಕ್ಲಾಮ್ ಪ್ರದೇಶವು ತನಗೆ ಸೇರಿದ್ದಲ್ಲ ಎಂದು ಸ್ವತಃ ಭೂತಾನ್ ರಾಷ್ಟ್ರವೇ ರಾಜತಾಂತ್ರಿಕ ಮಾರ್ಗದ ಮೂಲಕ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ. ಆದರೆ, ಈ ಸಂಬಂಧ ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ. 
ಡೋಕ್ಲಾಮ್ ವಿವಾದಿತ ಪ್ರದೇಶ. ಅದು ಭೂತಾನ್ ಗೆ ಸೇರಿದ್ದೆಂದು ಭೂತಾನ್ ನ ಮಿತ್ರ ದೇಶವಾದ ಭಾರತವು ಆ ಪ್ರದೇಶವನ್ನು ತನ್ನ ಹಿಡಿತಕ್ಕೆ ಇತ್ತೀಚೆಗೆ ತೆಗೆದುಕೊಂಡಿತ್ತು. ಆದರೆ, ಭೂತಾನ್ ನ ನಿಲುವು ಈಗ ಭಾರತಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ವಾಂಗ್ ವೆನ್ಲಿ ಅವರ ಈ ಹೇಳಿಕೆಯು ಡೋಕ್ಲಾಮ್ ವಿವಾದ ಸಂಬಂಧ ಭೂತಾನ್ ರಾಷ್ಟ್ರ ಈ ಮೊದಲು ನೀಡಿದ್ದ ಹೇಳಿಕೆಗೆ ಸಂಪುರ್ಣ ತದ್ವಿರುದ್ಧವಾಗಿದೆ. ದ್ವಿಪಕ್ಷೀಯ ಒಪ್ಪಂಧ ಉಲ್ಲಂಘಿಸಿರುವ ಚೀನಾ, ಡೋಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ ಜೂ.16 ರಂದು ಭೂತಾನ್ ಪ್ರತಿಭಟನೆ ದಾಖಲಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಮುಲಾಜೇ ಇಲ್ಲ, ಅನುಮತಿ ಇಲ್ದೇ ಬಂದ್ರೆ ಹೊಡೆದುರುಳಿಸ್ತೀವಿ': Iran ಎಚ್ಚರಿಕೆ

Kerala, Karnataka Bypoll & Assam, Puducherry Election 2026 Live Updates |ಮಧ್ಯಾಹ್ನ 1ರವರೆಗೆ ಅಸ್ಸಾಂನಲ್ಲಿ ಶೇ. 59.63, ಕೇರಳ ಶೇ. 49.7, ಪುದುಚೆರಿ ಶೇ. 56.83 ಮತದಾನ; ಸೊನಿತ್ಪುರ್ ನಲ್ಲಿ ಮತಗಟ್ಟೆ ಅಧಿಕಾರಿ ಸಾವು

ಪ. ಬಂಗಾಳ ಚುನಾವಣೆ: ಬಿಜೆಪಿ ಗೆದ್ದರೆ ಆರು ಗ್ಯಾರಂಟಿಗಳ ಜಾರಿಗೆ ಪ್ರಧಾನಿ ಮೋದಿ ವಾಗ್ದಾನ, ಟಿಎಂಸಿ ಕಿತ್ತೊಗೆಯಲು ಮತದಾರರಿಗೆ ಕರೆ!

ಇರಾನ್ ಯುದ್ಧವೇ ಮುಗಿದಿಲ್ಲ.. ಆಗಲೇ Ballistic Missile ಹಾರಿಸಿದ ಉತ್ತರ ಕೊರಿಯಾ, Japan ಹೈ ಅಲರ್ಟ್!

ಲೆಬೆನಾನ್ ಮೇಲೆ ಇಸ್ರೇಲ್ ದಾಳಿ; Hezbollah ಮುಖ್ಯಸ್ಥನ ಸಲಹೆಗಾರ ಹತ!

SCROLL FOR NEXT