ನವದೆಹಲಿ: ಬಾಬ್ರಿ ಮಸೀದಿ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದ್ದು, ಬಾಬ್ರಿ ಮಸೀದಿಯ ಒಡೆತನವನ್ನು ಸುನ್ನಿ ಪಂಗಡಕ್ಕೆ ನೀಡಲಾಗಿದ್ದ 71 ವರ್ಷದ ಹಿಂದಿನ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಮಂಡಳಿ ಪ್ರಶ್ನಿಸಿದೆ.
ಶುಕ್ರವಾರದಂದು ಬಾಬ್ರಿ ಮಸೀದಿ-ರಾಮ ಮಂದಿರ ಪ್ರಕರಣದ ವಿಚಾರಣೆ ನಡೆಯಲಿದ್ದು, ಇದೇ ವೇಳೆ ಬಾಬ್ರಿ ಮಸೀದಿಯ ಒಡೆತನವನ್ನು ಸುನ್ನಿ ಪಂಗಡಕ್ಕೆ ನೀಡಲಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಬೇಕೆಂದು ಮನವಿ ಸಲ್ಲಿಸಿದೆ. ಅಷ್ಟೇ ಅಲ್ಲದೇ ಅರ್ಜಿಯಲ್ಲಿ ಮಸೀದಿಯನ್ನು ಬಾಬರನ ಸಚಿವ ಅಬ್ದುಲ್ ಮೀರ್ ಬಾಖಿ ತನ್ನ ಸ್ವಂತ ಖರ್ಚಿನಿಂದ ನಿರ್ಮಿಸಿದ್ದ, ಮೀರ್ ಬಾಖಿ ಶಿಯಾ ಪಂಗಡಕ್ಕೆ ಸೇರಿದ್ದ, ಆತ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಶಿಯಾ ವಕ್ಫ್ ಮಂಡಳಿ ಹೇಳಿದೆ.
ಬಾಬ್ರಿ ಮಸೀದಿ ಒಡತನದ ಬಗ್ಗೆ ಸುನ್ನಿ ಹಾಗೂ ಶಿಯಾ ಪಂಗಡಗಳ ನಡುವಿನ ವ್ಯಾಜ್ಯವನ್ನು ಆಲಿಸಿದ್ದ ವಿಚಾರಣಾ ನ್ಯಾಯಾಲಯವು 1946 ಮಾರ್ಚ್ 30ರಂದು ಸುನ್ನೀ ಪಂಗಡ ಪರವಾಗಿ ತೀರ್ಪು ನೀಡಿತ್ತು.