ಸಂಗ್ರಹ ಚಿತ್ರ 
ದೇಶ

ಡೊಕ್ಲಾಂ ಸಂಘರ್ಷ: ಕೋಲ್ಕತಾದಲ್ಲಿ ನಡೆಯಬೇಕಿದ್ದ ಚೀನಾದ ಒಬೋರ್ ವಿಚಾರ ಸಂಕಿರಣ ರದ್ದು!

ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ನಡೆಯಬೇಕಿದ್ದ ಚೀನಾದ ಒನ್ ಬೆಲ್ಟ್-ಒನ್ ರೋಡ್ ಯೋಜನೆ ಮಹತ್ವಾಕಾಂಕ್ಷಿ ವಿಚಾರ ಸಂಕಿರಣ ಕಾರ್ಯಕ್ರಮ ರದ್ದುಗೊಂಡಿದೆ.

ಕೋಲ್ಕತಾ: ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ನಡೆಯಬೇಕಿದ್ದ ಚೀನಾದ ಒನ್ ಬೆಲ್ಟ್-ಒನ್ ರೋಡ್ ಯೋಜನೆ ಮಹತ್ವಾಕಾಂಕ್ಷಿ ವಿಚಾರ ಸಂಕಿರಣ ಕಾರ್ಯಕ್ರಮ ರದ್ದುಗೊಂಡಿದೆ.

"ಬಿಆರ್‌ಐ, ಬಿಸಿಐಎಂ ಆ್ಯಂಡ್‌ ರೋಲ್‌ ಆಫ್ ಈಸ್ಟರ್ನ್ ಇಂಡಿಯಾ" ಹೆಸರಿನ ವಿಚಾರ ಸಂಕಿರಣ ಇದಾಗಿದ್ದು, ಇದನ್ನು ಚೀನಾ ರಾಯಭಾರ ಕಚೇರಿ ಆಗಸ್ಟ್10ರಂದು ಕೋಲ್ಕತಾದಲ್ಲಿ ಹಮ್ಮಿಕೊಂಡಿತ್ತು. ಚೀನಾದ ಸಿಪೆಕ್‌  ಕಾರಿಡಾರ್‌ನಿಂದ ಕೋಲ್ಕತಾ ಮೂಲಕ ಬಾಂಗ್ಲಾದೇಶ, ಮ್ಯಾನ್ಮಾರ್‌ಗೆ ಸಂಪರ್ಕ ಕಲ್ಪಿಸುವ ಯೋಜನೆ ಕುರಿತ ವಿಚಾರ ಸಂಕಿರಣ ಇದಾಗಿತ್ತು.

ಆದರೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಗಡಿ ಬಿಕ್ಕಟ್ಟು ತಾರಕಕ್ಕೇರಿರುವ ಹಿನ್ನಲೆಯಲ್ಲಿ ಈ ಮಹತ್ವಾಕಾಂಕ್ಷಿ ವಿಚಾರ ಸಂಕಿರಣ ದಿಢೀರ್ ರದ್ದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೋಲ್ಕತಾದಲ್ಲಿರುವ ಚೀನಾ ರಾಯಭಾರ  ಕಚೇರಿ ಅಧಿಕಾರಿಗಳು "ಅನಿವಾರ್ಯ ಕಾರಣಗಳಿಂದ ವಿಚಾರ ಸಂಕಿರಣ ರದ್ದುಗೊಳಿಸಲಾಗಿದೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರ್ಥಿಕ ಅಂತರಸಂಪರ್ಕದ ಉದ್ದೇಶದಿಂದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಚೀನಾ ಬರೊಬ್ಬರಿ 1.3 ಟ್ರಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿದ್ದು, ಈ ಬೃಹಚ್ ಯೋಜನೆಯಡಿಯಲ್ಲಿ  ರಸ್ತೆಗಳು, ವಾಣಿಜ್ಯ ಬಳಕೆಯ ವಿಮಾನ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವುದು ಈ ಯೋಜನೆ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ಚೀನಾ ತನ್ನ ವಾಣಿಜ್ಯ  ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿದೆ. ಆದರೆ ಪ್ರಸ್ತುತ ಭಾರತದೊಂದಿಗೆ ಎದುರಾಗಿರುವ ಡೊಕ್ಲಾಂ ಗಡಿ ವಿವಾದ ಇದೀಗ ಚೀನಾದ ಈ ಯೋಜನೆ ಮೇಲೆ ಕರಿನೆರಳು ಬೀರುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel