ನವದೆಹಲಿ: ಕಾಂಗ್ರೆಸ್ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿಕೆ ಬೆನ್ನಲ್ಲೇ ಇದೀಗ ಮಾಜಿ ಸಂಸದ ಮಣಿಶಂಕರ್ ಅಯ್ಯರ್ ಸಹ ಇದೇ ಮಾತನ್ನು ಪುನರ್ ಉಚ್ಚರಿಸಿದ್ದಾರೆ.
ಕಾಂಗ್ರೆಸ್ಸಿಗರು ವಾಸ್ತವದ ಬಗ್ಗೆ ಗಮನ ಹರಿಸಬೇಕಿದೆ. ಇನ್ನು ಕಾಂಗ್ರೆಸ್ ನ 44 ಸಂಸದರು ಮಾತ್ರ ಇರುವುದರಿಂದ ಪಕ್ಷ ಗಂಭೀರ ಹಿನ್ನಡೆ ಎದುರಿಸುತ್ತಿದೆ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಕಾಂಗ್ರೆಸ್ ನ ಪ್ರಸ್ತುತ ರಾಜಕೀಯ ದೃಷ್ಠಿಯಿಂದ ಪಕ್ಷದ ಸದಸ್ಯರು ವ್ಯವಹರಿಸುತ್ತಿದ್ದು ಕಾಂಗ್ರೆಸ್ ಅಸ್ತಿತ್ವವಾದದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಚುನಾವಣಾ ಬಿಕ್ಕಟ್ಟಲ್ಲ. ಪಕ್ಷ ನಿಜವಾಗಿಯೂ ಆಳವಾದ ಬಿಕ್ಕಟ್ಟಿನಲ್ಲಿದೆ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಸುಲ್ತಾನರು ಹೋಗಿದ್ದಾರೆ. ಆದರೆ ನಾವು ಇನ್ನೂ ಸುಲ್ತಾನರಂತೆ ವರ್ತಿಸುತ್ತಿದ್ದೇವೆ. ಇನ್ನಾದರೂ ಪಕ್ಷದ ಏಳಿಗೆಗಾಗಿ ಹೊಸ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ ಎಂದರು. ಇನ್ನು ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಮೆಟ್ಟಿ ನಿಲ್ಲಲ್ಲು ಕಾಂಗ್ರೆಸ್ ನಾಯಕರು ಸಾಮೂಹಿಕ ಪ್ರಯತ್ನ ನಡೆಸುವ ಅಗತ್ಯವಿದೆ ಎಂದು ಹೇಳಿದ್ದು ನಿಜಕ್ಕೂ ಅರ್ಥಗರ್ಭಿತವಾಗಿದೆ ಎಂದರು.