ನವದೆಹಲಿ: ಜೆಡಿಯು ನಾಯಕ ನಿತೀಶ್ ಕುಮಾರ್ ತನ್ನ ಹಳೇಯ ದೋಸ್ತಿ ಸಖ್ಯ ಬೆಲೆಸುತ್ತಿರುವಂತೆ ಇದೀಗ ಬಿಹಾರದಲ್ಲಿ ಇನ್ನೊಂದು ರಾಜಕೀಯ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ.
ನಿತೀಶ್ ನೇತೃತ್ವದ ಜೆಡಿಯು ಇದೀಗ ಪಕ್ಷದ ಹಿರಿಯ ಸದಸ್ಯ ಶರದ್ ಯಾದವ್ ಅವರ ವಿರುದ್ಧ ಚಾಟಿ ಬೀಸಲಿದೆ ಮತ್ತು ಅವರಿಂದ ರಾಜ್ಯಸಭಾ ಸದಸ್ಯತ್ವವನ್ನು ಹಿಂಪಡೆಯುವ ಸಿದ್ಧತೆಯಲ್ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಶರದ್ ಯಾದವ್ ತಾವಾಗೇ ತಮ್ಮ ಸ್ಥಾನವನ್ನು ಬಿಟ್ಟುಕೊಡದಿದ್ದಲ್ಲಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಯಾದವ್ ಅವರು ತಾನು ಇದೇ ಆ.10ರಿಂದ 12ರ ತನಕ, ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಜೆಡಿಯು ಮತ್ತು ಆರ್‌ಜೆಡಿ ಮಹಾಘಟ್ ಬಂಧನದಿಂದ ಹಿಂದೆಗೆದುಕೊಂಡಿರುವುದರ ಪರಿಣಾಮಗಳನ್ನು ಜನರೊಡನೆ ಸುವುದಾಗಿ ತಿಳಿಸಿದ್ದ ಅವರು ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಅಭಿನಂದಿಸಿದ್ದರು.