ದೇಶ

ದುರಂತವಲ್ಲ.. ಸಾಮೂಹಿಕ ಹತ್ಯಾಕಾಂಡ: ಸಾಮ್ನಾದಲ್ಲಿ ಶಿವಸೇನೆ ಆಕ್ರೋಶ

Srinivasamurthy VN

ಮುಂಬೈ: ಸುಮಾರು 80 ಮಕ್ಕಳ ಸಾವಿಗೆ ಕಾರಣವಾದ ಗೋರಖ್ ಪುರ ಬಿಆರ್ ಡಿ ಆಸ್ಪತ್ರೆ ದುರಂತಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಶಿವಸೇನೆ ಕಿಡಿಕಾರಿದ್ದು, ಇದು ದುರಂತವಲ್ಲ..ಸಾಮೂಹಿಕ ಹತ್ಯಾಕಾಂಡ ಎಂದು  ಕಿಡಿಕಾರಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ತನ್ನ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಮಕ್ಕಳ ಸಾವಿನ ಪ್ರಕರಣದ ಮೂಲದ ಬಿಜೆಪಿ ಹಾಗೂ ಯೋಗಿ ಆದಿತ್ಯಾನಾಥ್ ಸರ್ಕಾರದ ಕಳಪೆ ವೈದ್ಯಕೀಯ ಮೂಲಭೂತ ಸೌಕರ್ಯದ  ಕನ್ನಡಿಯನ್ನು ಜಗತ್ತಿಗೆ ಪರಿಚಯಿಸಿದೆ. ಇದು ಯೋಗಿ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದ್ದು, 70ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ದೇಶಕ್ಕೆ ಇದೊಂದು ದೊಡ್ಡ ಅಪಮಾನ ಎಂದು ಸಾಮ್ನಾದಲ್ಲಿ  ಕಿಡಿಕಾರಲಾಗಿದೆ.

ಕೇಂದ್ರದಲ್ಲಿ ಸರ್ಕಾರ ಬದಲಾಗಿದೆಯೇ ಹೊರತು ಜನರ ಸಮಸ್ಯೆಗಳು ಹಾಗೆಯೇ ಇದೆ. ಸರ್ಕಾರ ಬಂದು ನಾಲ್ಕು ವರ್ಷಗಳೇ ಕಳೆದರೂ ಅಚ್ಚೇ ದಿನ್ ಎಂಬುದು ಮರೀಚಿಕೆಯಾಗಿದೆ. ಕೇಂದ್ರ ಸರ್ಕಾರ ಉದ್ಯಮಿಗಳ ಪರವಾದ  ಸರ್ಕಾರವಾಗಿದ್ದು, ಬಡ ಜನರ ಸರ್ಕಾರವಲ್ಲ ಎಂದು ಕಿಡಿಕಾರಿದೆ.

ಉತ್ತರ ಪ್ರದೇಶ ಆರೋಗ್ಯ ಸಚಿವ ರಾಜಿನಾಮೆಗೆ ಆಗ್ರಹ
ಇದೇ ವೇಳೆ ಆಗಸ್ಟ್ ತಿಂಗಳಲ್ಲಿ ಮಕ್ಕಳು ಸಾಯುವುದು ಸಾಮಾನ್ಯ ಎಂಬ ಉತ್ತರ ಪ್ರದೇಶ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರ ಹೇಳಿಕೆಯನ್ನು ಖಂಡಿಸಿರುವ ಶಿವಸೇನೆ, ಇದೊಂದು ಬೇಜವಾಬ್ದಾರಿ ತನದ  ಹೇಳಿಕೆಯಾಗಿದೆ. ತಮ್ಮ ಜವಾಬ್ದಾರಿ ಅರಿಯದೇ ನಿರ್ಲಕ್ಷ್ಯತವನದ ಹೇಳಿಕೆಗಳನ್ನು ನೀಡುವ ಮತ್ತು ಬೇಜವಾಬ್ದಾರಿ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಶಿವಸೇನೆ  ಆಗ್ರಹಿಸಿದೆ.

SCROLL FOR NEXT