ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಾಕಿಸ್ತಾನದ ಮಹಿಳೆಗೆ ವೈದ್ಯಕೀಯ ವೀಸಾಕ್ಕೆ ನೆರವು ನೀಡಿದ ಸಚಿವೆ ಸುಷ್ಮಾ ಸ್ವರಾಜ್

ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಕಿಸ್ತಾನ ಮಹಿಳೆಗೆ ಚಿಕಿತ್ಸೆಗೆ ವೀಸಾ ನೀಡುವುದಾಗಿ ವಿದೇಶಾಂಗ ಸಚಿವೆ ....

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Sumana Upadhyaya
Updated On : 14 Aug 2017, 10:07 am
ನವದೆಹಲಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಕಿಸ್ತಾನ ಮಹಿಳೆಗೆ ಚಿಕಿತ್ಸೆಗೆ ವೀಸಾ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ತನಗೆ ವೈದ್ಯಕೀಯ ವೀಸಾ ಕೊಡಿಸುವಂತೆ ಪಾಕಿಸ್ತಾನದ ಮಹಿಳೆ ಫೈಜಾ ತನ್ವೀರ್ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ವಿಡಿಯೊವೊಂದನ್ನು ಕೂಡ ಟ್ವಿಟ್ಟರ್ ನಲ್ಲಿ ತಿಂಗಳ ಹಿಂದೆ ಅಪ್ ಲೋಡ್ ಮಾಡಿದ್ದರು.
ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ, ನಿಮಗೆ ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ವಾಗತ. ನಿಮ್ಮ ಚಿಕಿತ್ಸೆ ವೈದ್ಯಕೀಯ ವೀಸಾ ಕೊಡಿಸುತ್ತೇವೆ ಎಂದಿದ್ದಾರೆ.

Advertisement

Advertisement

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ  ತನ್ವೀರ್, ನೀವು ನನಗೆ ತಾಯಿಯಿದ್ದಂತೆ. ಭಾರತ 70ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ದಯಮಾಡಿ  ನನಗೆ ವೀಸಾ ಕೊಡಿಸಿ ಎಂದು ಕೇಳಿದ್ದರು.  
ತನ್ವೀರ್ ಆಮ್ಲಬ್ಲಾಸ್ಟೊಮಾ ಎಂಬ ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement