ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 
ದೇಶ

ಭಯೋತ್ಪಾದನೆ ವಿರುದ್ಧದ ಭಾರತದ ಸಮರಕ್ಕೆ ಅನೇಕ ದೇಶಗಳ ಬೆಂಬಲ: ಪ್ರಧಾನಿ ಮೋದಿ

ಭಾರತದ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ವಿಶ್ವದ ಅನೇಕ ದೇಶಗಳು ಬೆಂಬಲ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ..

ನವದೆಹಲಿ: ಭಾರತದ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ವಿಶ್ವದ ಅನೇಕ ದೇಶಗಳು ಬೆಂಬಲ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಇಡೀ ದೇಶಾದ್ಯಂತ 71 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಾಚರಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ಸತತ ನಾಲ್ಕನೇ ಬಾರಿಗೆ ಕೆಂಪುಕೊಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದರು. ಪ್ರಮುಖವಾಗಿ ಭಯೋತ್ಪಾದನೆ, ಪ್ರವಾಹ, ವರ್ಣಬೇದ ನೀತಿ, ಸ್ವಚ್ಥಭಾರತ ಅಭಿಯಾನ  ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.

"ಭಾರತ ಮುಂದಿನ 5 ವರ್ಷಗಳ ಒಳಗೆ ಭ್ರಷ್ಟಾಚಾರ, ಉಗ್ರವಾದ, ವರ್ಣಭೇದ ನೀತಿಯಿಂದ ಮುಕ್ತವಾಗಬೇಕು. ಸ್ವಚ್ಛ ಭಾರತವಾಗಬೇಕು, ಗಾಂಧೀಜಿ ಅವರ ಸ್ವರಾಜ್ಯದ ಕನಸು ನನಸಾಗಬೇಕು. ಇದಕ್ಕೆ ಭಾರತೀಯರೆಲ್ಲರೂ ಒಂದಾಗಿ ನ್ಯೂ ಇಂಡಿಯಾಕ್ಕಾಗಿ ಕೆಲಸ ಮಾಡಬೇಕು' ಎಂದು ಕರೆ ನೀಡಿದರು. ಅಂತೆಯೇ ನೋಟು ನಿಷೇಧ ಮತ್ತು ಸ್ವಚ್ಛ ಭಾರತ ಯೋಜನೆಗೆ ಭಾರತೀಯರೆಲ್ಲರೂ ಬೆಂಬಲ ನೀಡಿದ್ದಾರೆ. ಇದರಿಂದ ಬಹಳಷ್ಟು ಬದಲಾವಣೆ ಕಂಡು ಬಂದಿದೆ. ನೋಟು ನಿಷೇಧದ ಬಳಿಕ 3 ಲಕ್ಷ ನಕಲಿ ಕಂಪೆನಿಗಳನ್ನು ಪತ್ತೆ ಹಚ್ಚಲಾಗಿದ್ದು, ಈಗಾಗಲೇ 2 ಲಕ್ಷ ಕಂಪೆನಿಗಳ ಪರವಾನಿಗೆ ರದ್ದು ಮಾಡಲಾಗಿದೆ' ಎಂದು ಹೇಳಿದರು.

ಕಾಶ್ಮೀರ ಸಮಸ್ಯೆಗೆ ಬಂದೂಕು ಬೇಕಿಲ್ಲ, ಪರಸ್ಪರ ಅಪ್ಪುಗೆಯೇ ಸಾಕು
ಇದೇ ವೇಳೆ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಶ್ಮೀರ ಸಮಸ್ಯೆಗೆ ಬಂದೂಕನ್ನೇ ಹಿಡಿಯಬೇಕೇಂದೇನೂ ಇಲ್ಲ. ಪರಸ್ಪರ ಪ್ರೀತಿಯ ಅಪ್ಪುಗೆಯ ಮೂಲಕವೂ ಸಮಸ್ಯೆ ಬಗೆಹರಿಸಿಕೊಳ್ಳಬಹುದು.  ಇಡೀ ದೇಶವೇ ಜಿಎಸ್‌ಟಿ ಜಾರಿಗೆ ಬೆಂಬಲ ನೀಡಿದ್ದು, ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ. ದೇಶವನ್ನು ಲೂಟಿ ಮಾಡಿದ ಮಂದಿ ಇಂದು ಸುಖವಾಗಿ ನಿದ್ರಿಸುತ್ತಿಲ್ಲ. ಸಂಯುಕ್ತ ವ್ಯವಸ್ಥೆಯ ಸ್ಪೂರ್ತಿಗೆ ಜಿಎಸ್ ಟಿ ಮಾದರಿಯಾಗಿದ್ದು, ಇಡೀ ದೇಶವೇ ಜಿಎಸ್ ಟಿ ಜಾರಿಗೆ ಬೆಂಬಲ ನೀಡಿತು.

ಗೋರಖ್‌ ಪುರದಲ್ಲಿ ಮೃತಪಟ್ಟ ಮುಗ್ಧ ಕಂದಮ್ಮಗಳ ಕುಟುಂಬದೊಂದಿಗೆ ಇಡೀ ದೇಶವೇ ನಿಲ್ಲುತ್ತದೆ. ಅಂತೆಯೇ ಪ್ರವಾಹದಿಂದಾಗಿ ನಲುಗಿರುವ ಪ್ರಜೆಗಳ ನೆರವಿಗಾಗಿ ಇಡೀ ದೇಶದ ಜನತೆ ಭುಜಕ್ಕೆ ಭುಜ ಕೊಟ್ಟ ನಿಂತಿದ್ದಾರೆ. ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿರುವ ಸಂತ್ರಸ್ತರೊಂದಿಗೆ ಇಡೀ ದೇಶವೇ ಬೆಂಬಲಕ್ಕೆ ನಿಂತಿದೆ. ''ಚಲ್ತಾ ಹೇ' (ನಡೆಯುತ್ತದೆ) ಎನ್ನುವ ಧೋರಣೆಯನ್ನು ಬಿಟ್ಟು 'ಬದಲ್‌ ಸಕ್ತಾ ಹೇ' (ಬದಲಾಗುತ್ತದೆ)ಅನ್ನುವ ಧೋರಣೆಯನ್ನು ನಮ್ಮದಾಗಿಸಿಕೊಳ್ಳಬೇಕು. ಆಗ ನಮ್ಮ ದೇಶ ಬದಲಾಗುತ್ತದೆ. ಇಡೀ ವಿಶ್ವದಲ್ಲೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ. ಇದೀಗ ದೇಶವನ್ನು ತಂತ್ರಜ್ಞಾನ ಮತ್ತು ಅಭಿವೃದ್ಧಿ ಪಥದತ್ತ ಮುನ್ನೆಸಬೇಕಿದೆ. ದೇಶದಲ್ಲಿ ತಂತ್ರಜ್ಞಾನದ ಕ್ರಾಂತಿಯಾಗ ಬೇಕಿದ್ದು, ದೇಶವನ್ನು ಡಿಜಿಟಲ್ ಪಾವತಿಯತ್ತ ಮುನ್ನಡೆಸಬೇಕಿದೆ.

2018ರ ಜನವರಿ 1 ಸಾಮಾನ್ಯ ದಿನವಲ್ಲ. ಅಂದು ಜನಿಸುವ ಮಕ್ಕಳು ದೇಶದ ಭಾಗ್ಯವಿಧಾತರಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು, ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

SCROLL FOR NEXT