ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಗುಂಡು ಅಥವಾ ಬೈಗುಳಗಳಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ. ಕೇವಲ ಪ್ರೀತಿಯಿಂದ ಮಾತ್ರ ಬಿಕ್ಕಟ್ಟನ್ನು ಸರಿಪಡಿಸಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನಲೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ದೇಶದ ಭದ್ರತೆಗೆ ನಮ್ಮ ಸರ್ಕಾರ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಗಡಿಯಲ್ಲಿ ನಡೆಯುವ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆ ಕುರಿತಂತೆ ಮಾತನಾಡಿರುವ ಅವರು, ಗುಂಡುಗಳಾಗಲೀ ಅಥವಾ ಬೈಗುಗಳಿಂದಾಗಲೀ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ. ಕೇವಲ ಪ್ರೀತಿಯಿಂದ ಮಾತ್ರ ಬಿಕ್ಕಟ್ಟು ಬಗೆಹರಿಯಲು ಸಾಧ್ಯ. ಕಾಶ್ಮೀರ ಸಮಸ್ಯೆಗೆ ಬಗೆಹರಿಸಲು ಬಂದೂಕುಗಳು ಬೇಕಿಲ್ಲ, ಪರಸ್ಪರ ಅಪ್ಪುಗೆಯೇ ಸಾಕು ಎಂದು ತಿಳಿಸಿದ್ದಾರೆ.
ನಂಬಿಕೆ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸುವುದು ಸ್ವೀಕಾರಾರ್ಹವಲ್ಲ: ಮೋದಿ
ಗೋಹತ್ಯೆ ಕುರಿತಂತೆ ಮಾತನಾಡಿರುವ ಮೋದಿಯವರು, ನಂಬಿಕೆಗಳ ಹೆಸರಿನಲ್ಲಿ ದೇಶದಲ್ಲಿ ಹಿಂಸಾಚಾರ ಸೃಷ್ಟಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಂದಿದ್ದಾರೆ.
ಒಬ್ಬ ನಂಬಿಕೆಗಳ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸುವುಗು ಸಂತಸವನ್ನು ತರುವುದಿಲ್ಲ. ಭಾರತದನ್ನು ಇದನ್ನು ಒಪ್ಪಲು ಸಾಧ್ಯವೂ ಇಲ್ಲ. ಶಾಂತಿ, ಐಕತೆ ಹಾಗೂ ಸೌಹಾರ್ದತೆಯೆಂದರೆ ಭಾರತ. ಜಾತಿ ಮತ್ತು ಕೋಮುವಾದ ನಮಗೆ ಸಹಾಯಕ್ಕೆ ಬರುವುದಿಲ್ಲ. ಜಾತಿ ಮತ್ತು ಕೋಮುವಾದವೆಂಬ ವಿಷ ಎಂದಿಗೂ ದೇಶಕ್ಕೆ ಪ್ರಯೋಜನವಾಗಲಾರದು. ಇಂತಹವುಗಳನ್ನು ಸಮರ್ಥಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.