ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ತ್ರಿವಳಿ ತಲಾಖ್ ಪದ್ಧತಿ ವಿರುದ್ಧ ದನಿ ಎತ್ತಿರುವ ಮುಸ್ಲಿಂ ಮಹಿಳೆಯರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದು, ಇಡೀ ದೇಶ ಮುಸ್ಲಿಂ ಮಹಿಳೆಯರಿಗೆ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಮಂಗಳವಾರ ಹೇಳಿದ್ದಾರೆ.
71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನಲೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ತ್ರಿವಳಿ ತಲಾಖ್ ಪದ್ಧತಿಯಿಂದಾಗಿ ಸಂಕಷ್ಟ ಜೀವನವನ್ನು ನಡೆಸುತ್ತಿರುವ ಮಹಿಳೆಯರಿಗೆ ಈ ಮೂಲಕ ಗೌರವಗಳನ್ನು ಸಲ್ಲಿಸುತ್ತೇನೆ. ತ್ರಿವಳಿ ತಲಾಖ್ ವಿರುದ್ಧ ದನಿ ಎತ್ತಿರುವ ಮಹಿಳೆಯರು ಇಂದು ಈ ಹೋರಾಟ ದೊಡ್ಡ ಚಳುವಳಿಯಾಗುವಂತೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ವಿರುದ್ಧ ಹೋರಾಟ್ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ನಾನು ಗೌರವ ಸಲ್ಲಿಸುತ್ತೇನೆ. ಈ ಹೋರಾಟದಲ್ಲಿ ಇಡೀ ದೇಶ ಅವರೊಂದಿಗೆ ಎಂದು ಹೇಳಲು ಇಚ್ಛಿಸುತ್ತೇನೆ. ಮಹಿಳಾ ಸಬಲೀಕರಣಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ. ಈ ಹೋರಾಟದಲ್ಲಿ ಅವರು ಗೆಲವು ಸಾಧಿಸುತ್ತಾರೆಂದು ತಿಳಿಸಿದ್ದಾರೆ.