ಬೆಂಗಳೂರು: ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ನ್ನು ಉದ್ಘಾಟನೆ ಮಾಡಲು ಆಗಮಿಸಿದ್ದ ರಾಹುಲ್ ಗಾಂಧಿ, ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಇಂದಿರಾ ಕ್ಯಾಂಟೀನ್ ಎನ್ನುವ ಬದಲು ಅಮ್ಮಾ ಕ್ಯಾಂಟೀನ್ ಎಂದಿದ್ದಾರೆ.
ಅಷ್ಟೇ ಅಲ್ಲದೇ ಭಾಷಣದ ವೇಳೆ ಹಲವಾರು ತಪ್ಪುಗಳನ್ನು ಮಾಡಿದ್ದು, : ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಅಮ್ಮಾ ಕ್ಯಾಂಟೀನ್ ನಲ್ಲಿ ಅಗ್ಗದ ದರದಲ್ಲಿ ಜನತೆ ಆಹಾರ ಪಡೆಯುತ್ತಾರೆ ಎಂದಿದ್ದಾರೆ, ರಾಹುಲ್ ಗಾಂಧಿ ಭಾಷಣ ಕೇಳಿದ ಹಲವರು ರಾಹುಲ್ ಗಾಂಧಿ ಇಂಡಿರಾ ಕ್ಯಾಂಟೀನ್ ಬಗ್ಗೆ ಮಾತನಾಡುತ್ತಿದ್ದಾರೋ ಅಥವಾ ತಮಿಳುನಾಡು ಖ್ಯಾತಿಯ ಅಮ್ಮಾ ಕ್ಯಾಂಟೀನ್ ಬಗ್ಗೆ ಮಾತನಾಡುತ್ತಿದ್ದಾರೋ ಎಂಬ ಗೊಂದಲಕ್ಕೀಡಾದರು.
ಇದೇ ವೇಳೆ ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಂದ 10 ರೂ ಪಡೆದು ವಾಂಗಿಬಾತ್ ಖರೀದಿಸಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದರು.