ದೇಶ

ಸೇನಾ ವೈದ್ಯರಿಗೆ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದ ಕೇಂದ್ರ

Raghavendra Adiga
ಹೊಸದಿಲ್ಲಿ: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಅಧಿಕಾರಿಗಳು ಮತ್ತು ತಜ್ಞರಿಗೆ ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 
"ಒಐಸಿ (ಆಫೀಸರ್ ಇನ್ ಚಾರ್ಜ್ ಪಾಲಿಕ್ಲಿನಿಕ್ಸ್), ವೈದ್ಯಕೀಯ ಅಧಿಕಾರಿಗಳು ಮತ್ತು ದಂತ ವೈದ್ಯಕೀಯ ಅಧಿಕಾರಿಗಳಿಗೆ  ರೂ .75,000 ಮತ್ತು ಎಲ್ಲಾ ತಜ್ಞರುಗಳಿಗೆ ಮೊದಲ ವರ್ಷಕ್ಕೆ 87,000 ರೂ.ಮತ್ತು ಎರಡನೆ ವರ್ಷ 1 ಲಕ್ಷ ರೂವೇತನಕ್ಕೆ ಅನುಮೋದನೆ ದೊರಕಿದೆ. 
ಇಸಿಎಚ್ ಎಸ್ (ಮಾಜಿ ಸೈನಿಕರಿಗೆ ಸಹಕಾರಿ ಆರೋಗ್ಯ ಯೋಜನೆ ) ಮತ್ತು ಪೋಲೀಸ್ ಪೇದೆಗಳಿಗೆ ಈ ಸೌಲಭ್ಯ ಆಗಸ್ಟ್ 17 ರಿಂದ ಜಾರಿಯಾಗಲಿದೆ.
"ಇಸಿಎಚ್ ಎಸ್  ಗುಣಮಟ್ಟದ ವೈದ್ಯರಿಗೆ ಎದುರು ನೋಡುತ್ತಿದೆ ಮತ್ತು ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ಸಮರ್ಪಕ ಆರೈಕೆ ಮಾಡಲು ಬಯಸುತ್ತದೆ" ಎಂದು ಭಾರತೀಯ ಸೇನೆಯ ಹೆಚ್ಚುವರಿ ಮಾಹಿತಿ ನಿರ್ದೇಶನಾಲಯವು ಅಧಿಕಾರಿಯೊಬ್ಬರು ನಿನ್ನೆ ಟ್ವೀಟ್ ಮಾಡಿದ್ದರು..
SCROLL FOR NEXT