ಸಂಗ್ರಹ ಚಿತ್ರ 
ದೇಶ

ಲಕ್ಷಣ ರೇಖೆ ದಾಟದಿರಿ: ಶರದ್ ಯಾದವ್ ಗೆ ಜೆಡಿಯು ಎಚ್ಚರಿಕೆ

ಜೆಡಿಯು ಹಿರಿಯ ನಾಯಕ ಶರದ್‌ ಯಾದವ್ ಅವರು ಆರ್ ಜೆಡಿ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡರೆ ಖಂಡಿತಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಜೆಡಿಯು ಸ್ಪಷ್ಟಪಡಿಸಿದೆ.

ಪಾಟ್ನಾ: ಜೆಡಿಯು ಹಿರಿಯ ನಾಯಕ ಶರದ್‌ ಯಾದವ್ ಅವರು ಆರ್ ಜೆಡಿ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡರೆ ಖಂಡಿತಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಜೆಡಿಯು ಸ್ಪಷ್ಟಪಡಿಸಿದೆ.

ಇದೇ ಆಗಸ್ಟ್ 27ರಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ತಮ್ಮ ಕುಟುಂಬದ ಮೇಲೆ ಇತ್ತೀಚೆಗೆ ನಡೆದ ಐಟಿ ಅಧಿಕಾರಿಗಳ ದಾಳಿ ಹಾಗೂ ಮೈತ್ರಿಯಿಂದ ನಿತೀಶ್ ಹೊರ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಜನತೆಗೆ ಸ್ಪಷ್ಟನೆ ನೀಡಲು ಲಾಲು ಈ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬೃಹತ್ ರ್ಯಾಲಿಗೆ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರೂ ಕೂಡ ಪಾಲ್ಗೊಳ್ಳುವ ಕುರಿತು ಸುದ್ದಿಗಳು ಹರಿದಾಡುತ್ತಿದ್ದು, ಈ ಸುದ್ದಿಗಳ ಬೆನ್ನಲ್ಲೇ ಜೆಡಿಯು ಶರದ್ ಯಾದವ್ ಅವರು ಲಕ್ಷಣ ರೇಖೆ ದಾಟದಂತೆ ಎಚ್ಚರಿಕೆ ನೀಡಿದೆ.

ಲಾಲೂ ಪ್ರಸಾದ್‌ರವರ ರ್ಯಾಲಿಯಲ್ಲಿ ಶರದ್ ಯಾದವ್ ಅವರು ಪಾಲ್ಗೊಂಡರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಜೆಡಿಯು ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಅವರು, ಶರದ್ ಯಾದವ್ ಅವರು  ಲಾಲೂ ಪ್ರಸಾದ್ ಯಾದವ್‌ರವರ ರ್ಯಾಲಿಯಲ್ಲಿ ಭಾಗವಹಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಶರದ್ ಯಾದವ್ ಅವರು ಈಗಾಗಲೇ ತಮ್ಮ ಬೆಂಬಲಿಗ ಶಾಸಕ ಮತ್ತು ಮುಖಂಡರನ್ನು ಪಕ್ಷದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಹೀಗಿದ್ದೂ ತಾವು ಸುಮ್ಮನ್ನಿದ್ದೇವೆ ಎಂದು ಹೇಳಿದ್ದಾರೆ.

ಅವರು ಹಿರಿಯರು ಮತ್ತು ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಕೂಡ ಇದೆ ಎಂಬ ಕಾರಣಕ್ಕೆ ಅವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಶರದ್ ಯಾದಪ್ ಅವರು ಲಕ್ಷ್ಣಣ ರೇಖೆ ದಾಟಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಖಂಡಿತಾ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಜೆ.ಡಿ.ಯು ವಕ್ತಾರ ಅಜಯ್ ಅಲೋಕ್ ಹೇಳಿದರು.

ಇದೇ ವೇಳೆ ಎನ್ ಡಿಎ ಮೈತ್ರಿಕೂಟ ಸೇರಲು ವಿರೋಧ ವ್ಯಕ್ತಪಡಿಸುವ ಮೂಲಕ ಶರದ್‌ ಯಾದವ್ ಹಾಸ್ಯದ ವಸ್ತುವಾಗಿದ್ದಾರೆ, ಅವರ ಹೇಳಿಕೆಗಳು ಹಾಸ್ಯಸ್ಪದವಾಗಿವೆ ಎಂದು ಅವರು ಟೀಕಿಸಿದರು. 2013ರಲ್ಲಿ ಎನ್ ಡಿಎ ಸೇರುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾಗಿ ಶರದ್‌ ಯಾದವ್ ಹೇಳಿದ್ದಾರೆ. ಆ ಸಂದರ್ಭದಲ್ಲಿ ಅವರೇ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಹಾಗಾಗಿ ಅವರ ಹೇಳಿಕೆಗಳು ಹಾಸ್ಯಾಸ್ಪದ ಎನಿಸಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!