ಇಸ್ಲಾಮಾಬಾದ್: ಹಿಜ್ಬುಲ್ ಮುಜಾಹೀದ್ದೀನ್ ಸಂಘಟನೆಯನ್ನು ಅಮೆರಿಕ, ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ನಡುವೆಯೇ, ಆ ಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯ ಫೋಟೋವನ್ನು ಪಾಕಿಸ್ತಾನದಲ್ಲಿ ವಸ್ತು ಪ್ರದರ್ಶನ ರೈಲೊಂದರಲ್ಲಿ ಪ್ರದರ್ಶಿಸಲಾಗಿದೆ.
70ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಪಾಕ್ ರೈಲ್ವೆ ಇಲಾಖೆ 'ಆಜಾದಿ' ರೈಲು ಎಂಬ ಆರ್ಟ್ ಗ್ಯಾಲರಿ ರೈಲಿಗೆ ಚಾಲನೆ ನೀಡಿದ್ದು, ಅದರಲ್ಲಿ ಕಳೆದ ವರ್ಷ ಕಾಶ್ಮೀರದಲ್ಲಿ ಸೇನೆಯಿಂದ ಹತನಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ವಾನಿಯ ಫೋಟೋ ಕೂಡ ಇದೆ. ಇದರಲ್ಲಿ ಕಾಶ್ಮೀರ ರಕ್ಷಿಸಿ, ಮಾನವೀಯತೆ ರಕ್ಷಿಸಿ ಎಂಬ ಘೋಷಣೆಯುಳ್ಳ ಬೋಗಿಯೊಂದರಲ್ಲಿ ವಾನಿಯ ಚಿತ್ರ ಪ್ರದರ್ಶಿಸಲಾಗಿದೆ.