ದೇಶ

ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ ಬೆಂಗಾವಲು ವಾಹನ ಡಿಕ್ಕಿ: ಮೂವರು ಸಾವು

Manjula VN
ಸುಪೌಲ್: ಬಿಹಾರ ರಾಜ್ಯದ ಸುಪೌಲ್ ಜಿಲ್ಲೆಯ ಸಂಸದೆ ಮತ್ತು ಕಾಂಗ್ರೆಸ್ ವಕ್ತಾರೆ ರಂಜಿತ್ ರಂಜನ್ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. 
ಬಿಹಾರ ರಾಜ್ಯದ ಸುಪೌಲಿ ಜಿಲ್ಲೆ ನಿರ್ಮಾಲಿ-ಸಿಕರ್ಹಟಾ ಮುಖ್ಯರಸ್ತೆಯಲ್ಲಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. 
ಸಂಸದೆ ರಂಜಿತ್ ರಂಜನ್ ಅವರು ಬಿಹಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದರು. ಈ ವೇಳೆ ಸಂಸದೆಯೊಂದಿಗೆ ತೆರಳುತ್ತಿದ್ದ ಕಾರೊಂದು ಜನರಿಗೆ ಗುದ್ದಿದೆ. ಪರಿಣಾಮ  ಇಬ್ಬರು ಮಕ್ಕಳು ಸೇರಿದೆ ಮೂವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 
ಅಪಘಾತ ಸಂದರ್ಭದಲ್ಲಿ ನಿರ್ಮಾಲಿ ವಿಭಾಗದ ಮುಖ್ಯಸ್ಥ ರಾಮ್ ಪ್ರಸೇಶ್ ಯಾದವ್ ಅವರೂ ಕೂಡ ಘಟನಾ ಸ್ಥಳದಲ್ಲಿದ್ದರು. ರಾಮ್ ಪ್ರಸೇಶ್ ಅವರು ಸೇರಿ ಮತ್ತಿಬ್ಬರಿಗೂ ಕೂಡ ಗಾಯಗಳಾಗಿರುವುದಾಗಿ ವರದಿಗಳು ತಿಳಿಸಿವೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ನಿರ್ಮಾಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಂಜಿತ್ ರಂಜನ್ ಅವರು, ನನ್ನ ಬೆಂಗಾವಲು ವಾಹನ ಯಾರಿಗೂ ಡಿಕ್ಕಿ ಹೊಡೆದಿಲ್ಲ. ಮಾಧ್ಯಮಗಳು ಹೇಳುತ್ತಿರುವಂತೆ ಯಾವುದೇ ಆಪಘಾತ ಸಂಭವಿಸಿಲ್ಲ, ಯಾರೂ ಸಾವನ್ನಪ್ಪಿಲ್ಲ. ನನ್ನ ಬೆಂಗಾವಲು ಪಡೆ ಡಿಕ್ಕಿ ಹೊಡೆದಿದೆ ಎಂಬ ಮಾಧ್ಯಮಗಳ ವರದಿ ಸುಳ್ಳು. ಅಪಘಾತ ನಡೆದಿರುವ ಸ್ಥಳದಿಂದ 12 ಕಿ.ಮೀ ದೂರದಲ್ಲಿ ನಾನಿದ್ದೆ. ಪ್ರಕರಣ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆಂದು ತಿಳಿಸಿದ್ದಾರೆ. 
SCROLL FOR NEXT