ಹೆಣ್ಣಾಗಿ ಹುಟ್ಟಿದ್ದ ಕೇರಳದ ಆರವ್ ಅಪ್ಪುಕುಟ್ಟನ್ (ಎಡಭಾಗ) ಹಾಗೂ ಸುಕನ್ಯ ಕೃಷ್ಣ 
ದೇಶ

ಪುರುಷನಾಗಿದ್ದ ಮಹಿಳೆಯನ್ನು ವಿವಾಹವಾಗಲಿರುವ ಮಹಿಳೆಯಾಗಿದ್ದ ಪುರುಷ!

ಹೆಡ್ಡಿಂಗ್ ನೋಡಿಯೇ ತಲೆ ಗಿರ್ ಎಂದಿರಬೇಕಲ್ವಾ? ಆದರೂ ಇದು ನಿಜ. ವಿಷಯ ಏನು ಅಂದ್ರೆ, ಹೆಣ್ಣಾಗಿ ಹುಟ್ಟಿದ್ದ ಕೇರಳದ ಆರವ್ ಅಪ್ಪುಕುಟ್ಟನ್ (46) ಪುರುಷನಾಗಿ ಹುಟ್ಟಿದ್ದ ಈಗ ಮಹಿಳೆಯಾಗಿ ಲಿಂಗ ಪರಿವರ್ತನೆ..

ಹೆಡ್ಡಿಂಗ್ ನೋಡಿಯೇ ತಲೆ ಗಿರ್ ಎಂದಿರಬೇಕಲ್ವಾ? ಆದರೂ ಇದು ನಿಜ. ವಿಷಯ ಏನು ಅಂದ್ರೆ, ಹೆಣ್ಣಾಗಿ ಹುಟ್ಟಿದ್ದ ಕೇರಳದ ಆರವ್ ಅಪ್ಪುಕುಟ್ಟನ್ (46) ಪುರುಷನಾಗಿ ಹುಟ್ಟಿದ್ದ ಈಗ ಮಹಿಳೆಯಾಗಿ ಲಿಂಗ ಪರಿವರ್ತನೆ ಹೊಂದಿರುವ ಸುಕಾನ್ಯ ಕೃಷ್ಣ (22) ನ್ನು ವಿವಾಹವಾಗಲಿದ್ದಾರೆ. 
ಸುಕನ್ಯ ಕೃಷ್ಣ ತನ್ನ ಕುಟುಂಬದವರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿರಬೇಕಾದರೆ ಕದ್ದಾಲಿಕೆ ಮಾಡಿದ್ದೆ. ಸಾಂದರ್ಭಿಕ ಸಂಭಾಷಣೆ ನಡೆಸುತ್ತಿರಬೇಕಾದರೆ ದೂರವಾಣಿ ಸಂಖ್ಯೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡೆವು ಎಂದು ಆರವ್ ಅಪ್ಪುಕುಟ್ಟನ್ ಹೇಳಿದ್ದಾರೆ. ಹೆಣ್ಣಾಗಿ ಹುಟ್ಟಿದ್ದ ಅಪ್ಪುಕುಟ್ಟನ್ 13 ವರ್ಷದವಳಾಗಿದ್ದಾಗ ಹೆಣ್ಣುಮಕ್ಕಳೆಡೆಗೆ ಹೆಚ್ಚು ಆಕರ್ಷಿತರಾಗಿದ್ದರಂತೆ, ಈ ವಿಲಕ್ಷಣ ಸ್ಥಿತಿಯನ್ನು ಗಮನಿಸಿದ್ದ ಆಕೆಯ ತಾಯಿ ವೈದ್ಯರ ಬಳಿಗೆ ಕರೆದೊಯ್ದಾಗ ಪ್ರೌಢವಸ್ಥೆ ತಲುಪುವಾಗ ಹಾರ್ಮೋನ್ ಗಳ ಅಸಮತೋಲನದಿಂದ ಈ ರೀತಿಯಾಗುತ್ತದೆ, ಕೆಲವು ವರ್ಷಗಳ ನಂತರವೂ ಇದೇ ರೀತಿ ಇದ್ದರೆ ಚಿಕಿತ್ಸೆ ಪಡೆಯಬಹುದು ಎಂದಿದ್ದರಂತೆ. ಆದರೆ ದಿನ ಕಳೆದಂತೆ ಆಕೆಯಲ್ಲಿನ ವಿಲಕ್ಷಣ  ಬದಲಾವಣೆಗಳು ಹೆಚ್ಚುತ್ತಿತ್ತು, ಈ ನಡುವೆಯೇ ತಾಯಿಯನ್ನು ಕಳೆದುಕೊಂಡು, ತನ್ನ ಸಮಸ್ಯೆಗಳತ್ತ ಗಮನ ಹರಿಸುವ ಮುನ್ನ ಒಡಹುಟ್ಟಿದವರ ಸಮಸ್ಯೆಗಳನ್ನೂ ಬಗೆಹರಿಸಬೇಕಿತ್ತು, ಈ ನಡುವೆ ತಂದೆ ಮತ್ತೊಂದು ವಿವಾಹವಾದರು ಎಂದು ಅಪ್ಪುಕುಟ್ಟನ್ ಹೇಳಿದ್ದಾರೆ. 
ಇನ್ನು ಸುಕನ್ಯ ಕೃಷ್ಣ ಅವರದ್ದೂ ಇದೇ ಕಥೆಯಾಗಿದ್ದು, ಗಂಡಾಗಿ ಜನಿಸಿದರೂ ಹಾರ್ಮೋನ್ ವ್ಯತ್ಯಯ ಸಮಸ್ಯೆ ಎದುರಿಸುತ್ತಿದ್ದರು. ಪೋಷಕರು  ವೈದ್ಯರ ಬಳಿಗೆ ಕರೆದೊಯ್ದೊಡನೆಯೇ ಪುರುಷ ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದರು, ಆದರೆ ನನ್ನೊಳಗೆ ಏನಾಗುತ್ತಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ನಂತರದ ದಿನಗಳಲ್ಲಿ ಲಿಂಗ ಪರಿವರ್ತನೆಗೊಂಡರು.  ಸಾಫ್ಟೇರ್ ಇಂಜಿನಿಯರ್ ಆಗಿರುವ ಸುಕನ್ಯ ಕೃಷ್ಣ ಹೆಣ್ಣಾಗಿ ಹುಟ್ಟಿದ್ದ ಅಪ್ಪುಕುಟ್ಟನ್ ಅವರನ್ನು ವಿವಾಹವಾಗಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ