ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗೌರಿ ಗಣೇಶ ಹಬ್ಬದ ಪ್ರಯುಕ್ತ 200 ರು. ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದು ಆಯ್ದ ಬ್ಯಾಂಕುಗಳಲ್ಲಿ ಶುಕ್ರವಾರದಿಂದಲೇ ಲಭ್ಯವಾಗಲಿದೆ.
ಹೊಸ ನೋಟಿನ ಚಿತ್ರವನ್ನು ಆರ್ಬಿಐ ಬಿಡುಗಡೆ ಮಾಡಿದ್ದು ಹೊಸ ನೋಟುಗಳು ಗಾಢ ಹಳದಿ ಬಣ್ಣದಲ್ಲಿದ್ದು ನೋಟಿನ ಮುಂಭಾಗದ ಮಧ್ಯಭಾಗದಲ್ಲಿ ಗಾಂಧಿ ಭಾವಚಿತ್ರವಿದೆ. ಇನ್ನು ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದೆ.
ಕಳೆದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಬಳಿಕ 500 ಮತ್ತು 2000 ರು. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತಂದಿತ್ತು. 2000 ರು. ನೋಟಿಗೆ ವ್ಯಾಪಕ ಚಿಲ್ಲರೆ ಅಭಾವ ಎದುರಾದ ಪರಿಣಾಮ ಹೆಚ್ಚುವರಿಯಾಗಿ 100 ರು. ಮುಖಬೆಲೆಯ ನೋಟುಗಳನ್ನು ಮುದ್ರಿಸಿತ್ತು. ನಂತರ ಆರ್ ಬಿಐ ಹೊಸ 200 ರು. ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಆದೇಶ ನೀಡಿತ್ತು. ಅಂತೆ ಇದೀಗ ಹೊಸ 200 ರು. ಮುಖಬೆಲೆಯ ನೋಟುಗಳ ಮುದ್ರಣ ವ್ಯಾಪಕವಾಗಿ ನಡೆದಿದ್ದು ನಾಳೆಯಿಂದ ಚಲಾವಣೆಗೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics