ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಪಿ.ಪಿ. ಚೌಧರಿ 
ದೇಶ

ಹರಿಯಾಣ ಹಿಂಸಾಚಾರವನ್ನು ರಾಜಕೀಯ ಮಾಡಬಾರದು: ಸಚಿವ ಪಿ.ಪಿ. ಚೌಧರಿ

ಹರಿಯಾಣ ರಾಜ್ಯ ಹಿಂಸಾಚಾರವನ್ನು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಪಿ.ಪಿ. ಚೌಧರಿಯವರು...

ನವದೆಹಲಿ: ಹರಿಯಾಣ ರಾಜ್ಯ ಹಿಂಸಾಚಾರವನ್ನು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಪಿ.ಪಿ. ಚೌಧರಿಯವರು ಶನಿವಾರ ಹೇಳಿದ್ದಾರೆ. 
ಹರಿಯಾಣ ರಾಜ್ಯ ಹಿಂಸಾಚಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹರಿಯಾಣ ರಾಜ್ಯ ಈಗಾಗಲೇ ಹೊತ್ತು ಉರಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಹಿಂಸಾಚಾರ ಪ್ರಕರಣ ಹಿಡಿದು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ರಾಜಕೀಯ ಮಾಡಬಾರದು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ರಾಜಕೀಯ ಪ್ರೇರಿತ ಹೇಳಿಕೆ ನೀಡಲು ಹಾಗೂ ರಾಜಕೀಯ ಮಾಡಲು ಇದು ಸಕಾಲವಲ ಎಂದು ಹೇಳಿದ್ದಾರೆ. 
ಹಿಂಸಾಚಾರವನ್ನು ತೀವ್ರವಾಗಿ ಖಂಡಿಸುತ್ತೇನೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಶಾಂತಿ ಕಾಪಾಡುವಂತೆ ಪ್ರತೀಯೊಬ್ಬರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ತೀರ್ಪಿನಿಂದ ಜನರು ಅತೃಪ್ತರಾಗಿದ್ದರೆ, ಸುಪ್ರೀಂಕೋರ್ಟ್ ಮೊರೆ ಹೋಗಬಹುದು ತಿಳಿಸಿದ್ದಾರೆ. 
ಹರಿಯಾಣ ರಾಜ್ಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಪರಿಶ್ರಮಗಳನ್ನು ಪಡುತ್ತಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಪರಿಸ್ಥಿತಿಯನ್ನು ಅವಲೋಕಿಸಿಸುತ್ತಿದ್ದಾರೆಂದು. ರಾಜ್ಯದಲ್ಲಿ ಪರಿಸ್ಥಿತಿ ಶೀಘ್ರದಲ್ಲಿಯೇ ನಿಯಂತ್ರಣಕ್ಕೆ ಬರಲಿದೆ. ಸರ್ಕಾರದ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದ ತಪ್ಪಿತಸ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್​​ಶಿಪ್​​ಗೆ ರೈತರ ಒಪ್ಪಿಗೆ; HDK ವಿರೋಧದ ನಡುವೆ ಜೂನ್ 1 ರಿಂದಲೇ ಹಣ ಬಿಡುಗಡೆ: ಡಿಕೆಶಿ ಮಹತ್ವದ ಘೋಷಣೆ

ಆರ್ಥಿಕತೆ ಎಕ್ಕುಟ್ಟಿ ಹೋಗಲಿ, ಆದ್ರೆ ಮೆಲೋನಿಗೆ 'ಮೆಲೋಡಿ' ಕೊಡುವುದು ತಡವಾಗ್ಬಾರ್ದು: ಖರ್ಗೆ ಕಿಡಿ

'My magical May, one more win': 'ವಿಜಯ'ದ ಸಂಭ್ರಮ ಹಂಚಿಕೊಂಡ ತ್ರಿಶಾ

ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಬೆನ್ನಲ್ಲೇ ಹಾಲಿನ ದರ 4 ರೂ. ಹೆಚ್ಚಳ; ಜೂನ್ 1 ರಿಂದ ಜಾರಿ

ಬಂಗಾಳದಲ್ಲಿ ಕೇವಲ ಹಿಂದೂ ಮತಗಳಿಂದ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ: ಖ್ಯಾತ ಸಮೀಕ್ಷೆದಾರ ಪ್ರದೀಪ್ ಗುಪ್ತಾ ಹೇಳಿದ್ದೇನು?

SCROLL FOR NEXT