ಹೈದರಾಬಾದ್: 240 ಪ್ರಯಾಣಿಕರಿದ್ದ ಖತಾರ್ ಏರ್ ವೇಸ್ ವಿಮಾನವೊಂದು ಶಂಶಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ನಡೆದಿದೆ.
ವಿಮಾನದ ಸಹ ಪೈಲಟ್ ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12.05ಕ್ಕೆ ಖತಾರ್ ಏರ್ ವೇಸ್ ವಿಮಾನ ತುರ್ತು ಭೂಸ್ಪರ್ಷ ಮಾಡಿದ್ದು, ಸಹ ಪೈಲಟ್ ಆಂಡ್ರಿಯಿ ದಿನು ಅವರನ್ನು ಜುಬ್ಲಿ ಹಿಲ್ಸ್ ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಿನು ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೋಹಾದಿಂದ ಇಂಡೋನೆಷ್ಯಾದ ದೆನ್ಪಾಸರ್ ಗೆ ತೆರಳುತ್ತಿದ್ದ ಕ್ಯೂಆರ್ 964 ಖತಾರ್ ಏರ್ ವೇಸ್ ವಿಮಾನವನ್ನು ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.