ಶರದ್ ಯಾದವ್ 
ದೇಶ

ಜೆಡಿಯು ನಾಯಕ ಶರದ್ ಯಾದವ್ ಗೆ ಬೆದರಿಕೆ ಪತ್ರ

ಜೆಡಿಯುನ ಬಂಡಾಯ ನಾಯಕ ಶರದ್ ಯಾದವ್ ಗೆ ಬೆದರಿಕೆ ಪತ್ರ ಬಂದಿದೆ. ಬಲಪಂಥೀಯ...

ನವದೆಹಲಿ: ಜೆಡಿಯುನ ಬಂಡಾಯ ನಾಯಕ ಶರದ್ ಯಾದವ್ ಗೆ ಬೆದರಿಕೆ ಪತ್ರ ಬಂದಿದೆ. ಬಲಪಂಥೀಯ ಗುಂಪಿನಿಂದ ಬಂದ ಪತ್ರ ಎಂದು ಆರೋಪಿಸಲಾಗಿದ್ದು ಬಿಹಾರ ರಾಜಕೀಯದಲ್ಲಿ ಮಧ್ಯಪ್ರವೇಶಿಸದಂತೆ ಮತ್ತು ದೇಶ ವಿರೋಧಿ ಬಣಗಳನ್ನು ಬೆಂಬಲಿಸದಂತೆ ಪತ್ರದಲ್ಲಿ ಶರದ್ ಯಾದವ್ ಅವರಿಗೆ ಎಚ್ಚರಿಕೆ ನೀಡಲಾಗಿದೆ.
ಪತ್ರದ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ರಾಜ್ಯ ಸಭಾ ಸದಸ್ಯ  ಶರದ್ ಯಾದವ್ ಅವರ ನಿವಾಸದ ವಿಳಾಸಕ್ಕೆ ಅಂಚೆಯಲ್ಲಿ ಪತ್ರ ಬಂದಿದೆ.
 ಬಿಹಾರ ಸರ್ಕಾರದ ವಿರುದ್ಧವಾಗಿ ಮಾತನಾಡಬಾರದು ಮತ್ತು ಹಿಂದೂಗಳ ವಿರುದ್ಧವಾಗಿ ನಡೆದುಕೊಂಡರೆ ಅದರ ಪರಿಣಾಮ ಎದುರಿಸಬೇಕಾದೀತು ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ.
ದೇಶ ವಿರೋಧಿ ಬಣಗಳ ಜೊತೆ ಗುರುತಿಸಿಕೊಂಡು ತಾವು ಬಹಳ ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದು ಪತ್ರದಲ್ಲಿ ಶರದ್ ಯಾದವ್ ಅವರನ್ನು ಆರೋಪಿಸಲಾಗಿದೆ.
ಆರ್ ಜೆಡಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಂಡು ತಮ್ಮ ಪಕ್ಷದ ನಾಯಕ ನಿತೀಶ್ ಕುಮಾರ್ ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ಶರದ್ ಯಾದವ್ ತೀವ್ರವಾಗಿ ವಿರೋಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ