ಅಮರಾವತಿ: ಆಂಧ್ರಪ್ರದೇಶದ ಉಪಚುನಾವಣೆ ಮುಗಿದಿದ್ದರೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರೋಧ ಪಕ್ಷದ ನಾಯಕ ಜಗನ್ಮೋಹನ್ ರೆಡ್ಡಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದಾರೆ.
ಡೇರಾ ಸಚ್ಚಾದ ಮುಖ್ಯಸ್ಥನಿಗೆ ಜಗನ್ ಮೋಹನ್ ರೆಡ್ಡಿ ಅವರನ್ನು ಹೋಲಿಕೆ ಮಾಡಿರುವ ಚಂದ್ರಬಾಬು ನಾಯ್ಡು, ಅವರು ಡೇರಾ ಬಾಬ ಆದರೆ ನಮ್ಮಲ್ಲಿ ಜಗನ್ ಬಾಬ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಜಗನ್ ಬಾಬಾ ವಿನಾಶಕಾರಿ ಹಾಗೂ ಕ್ರಿಮಿನಲ್ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ನಾಯ್ಡು ಟೀಕಾಪ್ರಹಾರ ಮಾಡಿದ್ದಾರೆ.
ಡೇರಾ ಸಚ್ಚಾದ ಬಾಬ ಒಳ್ಳೆಯ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಆದರೆ ತಮ್ಮ ಸಾಮರ್ಥ್ಯವನ್ನು ಕೆಟ್ಟದ್ದಕ್ಕೆ ಬಳಕೆ ಮಾಡಿಕೊಂಡು ಮಹಿಳೆಯರು ತಮ್ಮ ಬಗ್ಗೆ ಇದ್ದ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿಕೊಂಡರು. ಅಷ್ಟೇ ಅಲ್ಲದೇ, ಹಿಂಸಾಚಾರಕ್ಕೂ ಕಾರಣವಾದರು, ಅಂತೆಯೇ ನಮ್ಮವರೂ ಇದ್ದು, ಅವರನ್ನು ಜಗನ್ ಬಾಬ ಎಂದು ಕರೆಯುತ್ತೇನೆ ಎಂದು ಚಂದ್ರಬಾಬು ನಾಯ್ಡು ಜಗನ್ ಮೋಹನ್ ರೆಡ್ಡಿ ಬಗ್ಗೆ ವ್ಯಂಗ್ಯವಾಡಿದ್ದಾರೆ.