ಪಲ್ಸರ್ ಸುನಿ 
ದೇಶ

ಮಲೆಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ಕಾವ್ಯಾ ಮಾಧವನ್ ನನ್ನ ಮೇಡಂ ಎಂದ ಪಲ್ಸರ್ ಸುನಿ

ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಲೆಯಾಳಂ ನಟ ದಿಲೀಪ್ ಅವರ ಪತ್ನಿ....

ಕೊಚ್ಚಿ: ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಲೆಯಾಳಂ ನಟ ದಿಲೀಪ್ ಅವರ ಪತ್ನಿ ಕಾವ್ಯಾ ಮಾಧವನ್ ಅವರು ನನ್ನ ಮೇಡಂ ಎಂದು ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ಬುಧವಾರ ವರದಿಗಾರರಿಗೆ ಹೇಳಿದ್ದಾನೆ.
ಇಂದು ಪಲ್ಸರ್ ಸುನಿಯನ್ನು ಎರ್ನಾಕುಲಂ ಸಿಜೆಎಂ ಕೋರ್ಟ್ ಗೆ ಕರೆದೊಯ್ಯುತ್ತಿರುವ ವೇಳೆ ಆರೋಪಿ ಈ ಹೇಳಿಕೆ ನೀಡಿದ್ದಾನೆ. ಆದರೆ ಮಲೆಯಾಳಂ ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣದ ಹಿಂದೆ ಕಾವ್ಯಾ ಮಾಧವನ್ ಕೈವಾಡ ಇದೇಯಾ ಎಂಬ ವರದಿಗಾರರ ಪ್ರಶ್ನೆಗೆ ಇಲ್ಲ ಎಂದು ಮಾತ್ರ ಉತ್ತರಿಸಿದ್ದಾನೆ. 
ಕಳೆದ ಆಗಸ್ಟ್ 15ರಂದು ಪಲ್ಸರ್ ಸುನಿ ನನ್ನ ಮೇಡಂ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಹೇಳಿದ್ದ. ಈಗ ಪಲ್ಸರ್ ಸುನಿ ನೀಡಿರುವ ಹೇಳಿಕೆಯಿಂದ ಮಲೆಯಾಳಂ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಅಚ್ಚರಿಯ ಸಂಗತಿಯೆಂದರೆ, ಕಾವ್ಯಾ ಮಾಧವನ್ ಅವರು ಪಲ್ಸರ್ ಸುನಿ ಯಾರು ಎಂಬುದು ಗೊತ್ತೇ ಇಲ್ಲ, ನನಗೂ ಆತನಿಗೂ ಯಾವುದೇ ಸಂಪರ್ಕ, ಸಂಬಂಧವಿಲ್ಲ ಎಂದು ಪೊಲೀಸರು ನಡೆಸಿದ್ದ ವಿಚಾರಣೆಯಲ್ಲಿ ತಿಳಿಸಿದ್ದರು. ಅದು ಈಗ ಉಲ್ಟಾ ಹೊಡೆದಿದ್ದು, ಪಲ್ಸರ್ ಸುನಿ ಮತ್ತು ಕಾವ್ಯಾ ಸಂಪರ್ಕದಲ್ಲಿದ್ದರು ಎಂಬುದು ಖಚಿತವಾಗಿದೆ.
ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪಲ್ಸರ್ ಸುನಿಯನ್ನು ಫೆ.23ರಂದು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣ ಸಂಬಂಧ ಜುಲೈ 10ರಂದು ನಟ ದಿಲೀಪ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಸುನಿಲ್ ಸೇರಿದಂತೆ ಇನ್ನಿತರೆ ಆರೋಪಿಗಳ ವಿರುದ್ಧ ಕೇರಳ ಪೊಲೀಸರು ಐಪಿಸಿ ಸೆಕ್ಸನ್ 342 (ಅಕ್ರಮ ಬಂಧನ), 366 (ಅಪಹರಣ ಅಥವಾ ಮಹಿಳೆಯ ಅಪಹರಣ), 376 (ಅತ್ಯಾಚಾರ, 506 (1) ಮತ್ತು 120 (ಬಿ) (ವಂಚನೆ)) ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

GBA: ಖಾಲಿ ನಿವೇಶನ ಸ್ವಚ್ಛಗೊಳಿಸದ, ಡೆಬ್ರಿಸ್ ತೆರವುಗೊಳಿಸದ ಮಾಲೀಕರೆ ಎಚ್ಚರ! 19 ಸಾವಿರ ರೂಗಳಿಂದ 1.28 ಲಕ್ಷವರೆಗೂ ಬೀಳಲಿದೆ ದಂಡ!

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!