ದೇಶ

ಸುನಂದಾ ಪುಷ್ಕರ್ ಪ್ರಕರಣ: ನಮ್ಮಿಂದ ವಿಳಂಬವಾಗಿಲ್ಲ ಎಂದ ದೆಹಲಿ ಪೊಲೀಸ್

Raghavendra Adiga
ನವದೆಹಲಿ: ಸುನಂದಾ ಪುಷ್ಕರ್ ಪ್ರಕರಣದಲ್ಲಿ ನಮ್ಮಿಂದ ಯಾವುದೇ ವಿಳಂಬವಾಗಿಲ್ಲ ಎಂದು ದೆಹಲಿ ಪೊಲೀಸರು ಹೈ ಕೋರ್ಟ್ ಗೆ ತಿಳಿಸಿದ್ದಾರೆ.
ತನಿಖೆಯು ತಾಂತ್ರಿಕ ಅಂಶಗಳು ಸಂಪೂರ್ಣವಾಗಿ ನಮ್ಮ ಕೈಯಲ್ಲಿಲ್ಲ ಎಂದು ಅವರು ದೆಹಲಿ ಹೈ ಕೋಋಟ್ ಗೆ ತಿಳಿಸಿದರು, ಎಐಐಎಂಎಸ್ ಮತ್ತು ಕೆಲವು ವಿದೇಶಿ ಸಂಸ್ಥೆಗಳು ಈ ಪ್ರಕರಣವನ್ನು ಬಗೆಹರಿಸುವಲ್ಲಿ ತೊಡಗಿದೆ ಎಂದು ಅವರು ಕೋರ್ಟ್ ಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ಸಿಬಿಐ ಗೆ ವಹಿಸಬೇಕೆಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ಕೋರಿದ್ದಾರೆ. ತನಿಖೆ ಏಜೆನ್ಸಿಗಳು ಪುಷ್ಕರ್ ಸಾವು ವಿಷದಿಂದ ಸಂಭವಿಸಿದೆವ್ ಎಂದಿದ್ದು ಇದು ಯಾವ ಪ್ರಕಾರದ ವಿಷ ಎನ್ನುವುಉದು ಮುಖ್ಯವಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕಾದ ಎಫ್ ಬಿಐ ಮತ್ತು ಇತರ ಅಂತರಾಷ್ಟ್ರೀಯ ಏಜೆನ್ಸಿಗಳ ತನಿಖೆಯು, ಪ್ರಕರಣದ ತನಿಖೆಯನ್ನು ಇನ್ನಷ್ಟು ಮುಂದೊತ್ತುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪೋಲಿಸರಿಗೆ ಅಂತಿಮ ಗಡುವು ನೀಡಿರುವ ದೆಹಲಿ ಹೈಕೋರ್ಟ್, "ನೀವು ಸಾಕ್ಷಿಯನ್ನು ಹೊಂದಿದ್ದರೆ 2 ವಾರಗಳಲ್ಲಿಯೇ ಬನ್ನಿ ಮತ್ತು ನಿಮಗೆ ಸಾಧ್ಯವಾಗದಿದ್ದರೆ ನಾವು ಅದಕ್ಕೆ ಪರ್ಯಾಯವನ್ನು ಸೂಚಿಸುತ್ತೇವೆ." ಎಂದಿದೆ.
ಈ ಮುನ್ನ ಆಗಸ್ಟ್ 19 ರಂದು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ದೆಹಲಿ ಪೋಲಿಸರಿಗೆ ಸುನಂದಾ ಸಾವಿನ ತನಿಖೆ ಚುರುಕಾಗಿಸುವಂತೆ ಒತ್ತಡ ಹೇರಿತ್ತು.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ದಕ್ಷಿಣ ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಜನವರಿ 17, 2014 ರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
SCROLL FOR NEXT