ಇಂದೋರ್: ಮಹಿಳೆಯರಿಬ್ಬರು ವಿಷ ಬೆರೆಸಿದ ಚಹಾದೊಂದಿಗೆ ಕೊನೆಯ ಸೆಲ್ಫಿ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನ ಗುರುನಗರ ಪ್ರದೇಶದಲ್ಲಿ ಕಾಲ್ ಸೆಂಟರ್ ಉದ್ಯೋಗಿಗಳಾದ ರಚನಾ ಚೌಧರಿ ಮತ್ತು ತನ್ವಿ ಒಂದೇ ರೂಂನಲ್ಲಿ ವಾಸವಾಗಿದ್ದರು. ಎರಡು ದಿನಗಳಿಂದ ಇವರಿಬ್ಬರು ರೂಂನ ಬಾಗಿಲು ಹಾಕಿದ್ದು ತೆಗೆದಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇನ್ನು ರೂಂನಲ್ಲಿ ಆತ್ಮಹತ್ಯೆ ಪತ್ರ ಮತ್ತು ವಿಷ ಬೆರೆಸಿದ್ದ ಕಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಮಹಿಳೆಯರಿಬ್ಬರು ಆತ್ಮಹತ್ಯೆಗೂ ಮುನ್ನ ವಿಷ ಬೆರೆಸಿದ ಚಹಾದ ಕಪ್ ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯರ ಪೈಕಿ ರಚನಾ ಎಂಬುವರಿಗೆ ಮದುವೆಯಾಗಿ ಓರ್ವ ಮಗ ಕೂಡ ಇದ್ದ. ಗಂಡನೊಂದಿಗಿನ ವೈಮನಸ್ಸಿನಿಂದ ಪತಿಯನ್ನು ತೊರೆದಿದ್ದ ರಚನಾ ತನ್ವಿ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಎಎಸ್ಪಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics