ನವದೆಹಲಿ: 500, 1000 ರೂ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಬಿಐ ಅಂಕಿ-ಅಂಶಗಳನ್ನು ಬಹಿರಂಗಪಡಿಸುತ್ತಿರುವುದರಿಂದ ಮೋದಿ ಜನಪ್ರಿಯತೆಗೆ ಹಾನಿ ಉಂಟಾಗುವುದಿಲ್ಲ ಎಂದು ಭಾರತದ ಮಾಜಿ ಮುಖ್ಯ ಸ್ಟ್ಯಾಟಿಸ್ಟೀಷಿಯನ್ ಹಾಗೂ ಯೋಜನಾ ಜಾರಿಯ ಮಾಜಿ ಕಾರ್ಯದರ್ಶಿ ಪ್ರಣಬ್ ಸೇನ್ ಅಭಿಪ್ರಾಯಪಟ್ಟಿದ್ದಾರೆ.
ಆರ್ ಬಿಐ ನೋಟು ನಿಷೇಧದ ಅಂಕಿ-ಅಂಶಗಳ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಣಬ್ ಸೇನ್, ಆರ್ ಬಿಐ ನ ಅಂಕಿ-ಅಂಶ ನಿರೀಕ್ಷೆಯಂತೆಯೇ ಇದೆ. ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯೂ ಸಹ ಮಾಹಿತಿ ನೀಡಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ. ಆದರೆ ಆರ್ ಬಿಐ ನ ಅಂಕಿ-ಅಂಶಗಳಿಂದ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಗೆ ಧಕ್ಕೆ ಉಂಟಾಗುವುದಿಲ್ಲ ಎಂದು ಪ್ರಣಬ್ ಸೇನ್ ಹೇಳಿದ್ದಾರೆ.